ಬೆಂಗಳೂರು, ಜು.3- ಚಲಿಸುತ್ತಿದ್ದ ರೈಲಿನ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ರೈಲಿನ ಲೋಕೋ ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಇಂದು ಬೆಳಗ್ಗೆ ಮೈಸೂರಿನಿಂದ ಉದಯಪುರ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ಬರುತ್ತಿತ್ತು.ಮಾರ್ಗಮಧ್ಯೆ ಚನ್ನಪಟ್ಟಣ ದಾಟಿ ರಾಮನಗರಕ್ಕೆ ಬರುತ್ತಿದ್ದಾಗ ವಂದಾರಗುಪ್ಪೆ ಬಳಿ 11.30 ರ ಸುಮಾರಿನಲ್ಲಿ ಏಕಾಏಕಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ರೈಲಿನ ಲೋಕೋ ಪೈಲೆಟ್ ರವರು ರೈಲನ್ನು ನಿಲ್ಲಿಸಿ, ಬೆಂಕಿಯನ್ನು ನಂದಿಸಿ ರೈಲು ಪ್ರಯಾಣಿಕರ ಪ್ರಾಣ ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.