ಹುಬ್ಬಳ್ಳಿ, ಜು.3: ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರು ಸ್ವಯಂ ಘೋಷಿತ ರಾಜೀನಾಮೆಗೆ ಮುಂದಾಗಿದ್ದಾರೆ.
ಒಂದು ತಿಂಗಳ ಹಿಂದೆಯೇ ನಾರಾಯಣ ವಿ ಭರಮನಿ ರಾಜೀನಾಮೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಮನವೊಲಿಸುವ ಕಾರ್ಯವು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾಗಿದೆ. ಈ ಕುರಿತು ರಾಜೀನಾಮೆ ಪತ್ರದಲ್ಲಿ ನಾರಾಯಣ ಭರಮನಿ ಸರಕಾರದ ವಿರುದ್ದ ಉಲ್ಲೇಖ ಮಾಡಿದ್ದಾರೆ.ಈ ನಡುವೆ ಸಿಎಂ ವೇದಿಕೆ ಮೇಲೆ ಅವಮಾನ ಮಾಡಿದ್ದಕ್ಕೆ ಬೇಸರಗೊಂಡು ನಾರಾಯಣ.ವಿ.ಭರಮನಿ ಅವರು ರಾಜೀನಾಮೆಗೆ ಮುಂದಾಗಿದ್ದ ಎಂಬ ಮಾತುಗಳು ಕೇಳಿಬಂದಿವೆ.
ಇನ್ನು ನಾರಾಯಣ ಭರಮನಿ ಅವರ ಮನವೊಲಿಸಲು ಸ್ವತಃ ಕಾನೂನು ಸಚಿವ ಎಚ್ ಕೆ ಪಾಟೀಲ್ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಕರೆದುಕೊಂಡು ಮಾತನಾಡಿದ್ದರು ಇನ್ನು ಸ್ವತಃ ಗೃಹ ಸಚಿವ ಪರಮೇಶ್ವರ ಅವರು ಸಹ ನಾರಾಯಣ ಭರಮನಿ ಜೊತೆಗೆ ಮಾತನಾಡಿ ರಾಜೀನಾಮೆ ವಾಪಾಸು ತೆಗೆದುಕೊಳ್ಳಲು ಕೇಳಿಕೊಂಡಿದ್ದರು.
ನಾರಾಯಣ.ವಿ.ಭರಮನಿ ಅವರು 1994ರ ಬ್ಯಾಚ್‌ನ ಪೊಲೀಸ್ ಅಧಿಕಾರಿ. ಬೆಳಗಾವಿ ಜಿಲ್ಲೆಯಲ್ಲಿ ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿದ್ದಾರೆ. 2007ರಲ್ಲಿ ನಡೆದ ಕುಖ್ಯಾತ ರೌಡಿ ಪ್ರವೀಣ್ ಶಿಂತ್ರೆ ಎನ್‌ಕೌಂಟರ್ ಅನ್ನು ಅವರೇ ಮುನ್ನಡೆಸಿದ್ದರು. ನಾರಾಯಣ.ವಿ.ಭರಮನಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಗ್ರಾಮದವರು. ಅವರು ಜಮೀನ್ದಾರ ಕುಟುಂಬಕ್ಕೆ ಸೇರಿದವರು.

- ಬೈಕ್ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು
- ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ, ಮೃತರ ಸಂಖ್ಯೆ 31ಕ್ಕೆ ಏರಿಕೆ
- ಹೃದಯಘಾತಕ್ಕೆ ಕೊರೊನಾ ಲಸಿಕೆ ಕಾರಣ ಎಂಬ ಸಿಎಂ ಹೇಳಿಕೆ ತಪ್ಪು ; ಮಜುಂದಾರ್ ಶಾ
- ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು
- ಸಚಿವ ಕೆ.ಎನ್. ರಾಜಣ್ಣ ಅವರಿಗೆ ನೋಟಿಸ್ ನೀಡುವಂತೆ ಕಾಂಗ್ರೆಸ್ ಶಾಸಕರು ಆಗ್ರಹ