ಬೆಂಗಳೂರು, ಜು.3-ಭೀಕರವಾಗಿ ಕೊಲೆಯಾದ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರ ಮಗಳು ನಂದಿನಿ ಪಾರ್ಲರ್ ಗೆ ಹೋಗಿದ್ದಾಗ ದಾಂದಲೆ ನಡೆಸಿದ್ದಾರೆ.ಕಳೆದ ಸೋಮವಾರ ಓಂಪ್ರಕಾಶ್ ರವರ ಮಗಳು ಕೃತಿಕಾ ಅವರು ಮನೆ ಸಮೀಪದ ನಂದಿನಿ ಪಾರ್ಲರ್ ಬಳಿ ಹೋಗಿದ್ದು ಏನೂ ಖರೀದಿಸಿಲ್ಲ. ಮಳಿಗೆಯಲ್ಲಿದ್ದ ಮಾಲೀಕನನ್ನು ದಿಟ್ಟಿಸಿ ನೋಡುತ್ತಿದ್ದಳು.
ಕೃತಿಕಾಳನ್ನು ಗಮನಿಸಿದ ಮಾಲೀಕ ಏಕೆ ಹೀಗೆ ನೋಡುತ್ತಿದ್ದೀರಾ ಎಂದು ಕೇಳಿದಾಗ ಕೋಪಗೊಂಡ ಆಕೆ ಏಕಾಏಕಿ ಮಳಿಗೆಯಲ್ಲಿದ್ದ ತಿಂಡಿಗಳ ಡಬ್ಬಿಗಳನ್ನು ಒಡೆದು ಹಾನಿ ಮಾಡಿ, ನಂದಿನಿ ಮಳಿಗೆ ಮಾಲೀಕನ ಮೇಲೂ ಹಲ್ಲೆ ನಡೆಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಎನ್‌ಸಿಆರ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.ನಿವೃತ್ತ ಡಿಜಿಪಿ ಓಂಪ್ರಕಾಶ್ ರವರನ್ನು ಕೊಲೆ ಮಾಡಿದ ಆರೋಪದ ಮೇಲೆ ತಾಯಿ ಜೈಲಿನಲ್ಲಿದ್ದಾರೆ. ಅಣ್ಣ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.
ಹಾಗಾಗಿ ಮನೆಯಲ್ಲಿ ಕೃತಿಕಾ ಒಬ್ಬಳೇ ಇರುವುದರಿಂದ ಆಕೆಗೆ ಒಂದು ರೀತಿ ಒಂಟಿತನ ಕಾಡುತ್ತಿದೆ.ಕೃತಿಕಾಳ ವರ್ತನೆ ನೋಡಿ ಸುತ್ತಮುತ್ತಲಿನ ನಿವಾಸಿಗಳು ಭಯ ಭೀತರಾಗಿದ್ದಾರೆ.
- ವಿಧಾನಸಭೆಯಲ್ಲಿ ಕಠಿಣ ಎಸ್ಮಾ ಕಾಯ್ದೆ ವಿಧೇಯಕ ಅಂಗೀಕಾರ
- ಅಪಾಯಮಟ್ಟ ಮೀರಿ ಹರಿಯುತ್ತಿದೆ ಗಂಗಾನದಿ, ಪ್ರವಾಹ ಭೀತಿ
- ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಮಸೂದೆ ಅಂಗೀಕಾರ, ಚುನಾವಣೆ ಸನ್ನಿಹಿತ
- ಸಿದ್ದರಾಮಯ್ಯ ಸರ್ಕಾರಕ್ಕೆ ಒಳ ಮೀಸಲಾತಿ ಕಂಟಕ
- ಬಾಗಲಕೋಟೆಯಲ್ಲಿರುವ ಕೃಷಿ ವಿವಿ ಮುಚ್ಚುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ : ಸಚಿವ ಚಲುವರಾಯಸ್ವಾಮಿ