Friday, July 4, 2025
Homeರಾಷ್ಟ್ರೀಯ | Nationalಕೊರಿಯರ್‌ ಡೆಲಿವರಿ ಏಜೆಂಟ್‌ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರ

ಕೊರಿಯರ್‌ ಡೆಲಿವರಿ ಏಜೆಂಟ್‌ ನೆಪದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರ

Woman raped by man posing as courier delivery agent

ಪುಣೆ, ಜುಲೈ.3-ಕೊರಿಯರ್‌ ಡೆಲಿವರಿ ಏಜೆಂಟ್‌ ಎಂದು ಹೇಳಿಕೊಂಡುಬಂದ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್‌ ಸೊಸೈಟಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಮಹಿಳೆ ಒಬ್ಬಂಟಿಯಾಗಿದ್ದಳು, ಆಕೆಯ ಸಹೋದರ ಕೆಲಸಕ್ಕೆ ಹೋಗಿದ್ದ. ಸಂಜೆ 7.30 ರ ಸುಮಾರಿಗೆ, ದುಷ್ಕರ್ಮಿ ಕೊರಿಯರ್‌ ಬಂದಿದೆ ಎಂದು ಹೇಳಿಕೊಂಡು ಫ್ಲಾಟ್‌ಗೆ ಪ್ರವೇಶಿಸಿದಾನೆ.

ನಂತರ ಮಹಿಳೆಯ ಮುಖಕ್ಕೆ ಮೇಲೆ ಸ್ಪ್ರೇ ಬಳಸಿ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಕೃತ್ಯ ನಂತರ ನಂತರ ಆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News