Friday, July 4, 2025
Homeರಾಷ್ಟ್ರೀಯ | Nationalದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಪತಂಜಲಿಗೆ ದೆಹಲಿ ಹೈಕೋರ್ಟ್‌ ನಿರ್ಬಂಧ

ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಪತಂಜಲಿಗೆ ದೆಹಲಿ ಹೈಕೋರ್ಟ್‌ ನಿರ್ಬಂಧ

Delhi HC restrains Patanjali from running 'disparaging' advertisements

ನವದೆಹಲಿ,ಜು.3- ಬಾಬಾ ರಾಮ್‌ದೇವ್‌ ಅವರ ಪತಂಜಲಿ ಆಯುರ್ವೇದವು ಡಾರ್ಬದ ಚವಸ್ಪ್ರಾಶ್‌ ಅನ್ನು ಗುರಿಯಾಗಿಸಿಕೊಂಡು ಯಾವುದೇ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ನಿರ್ಬಂಧಿಸಿದೆ. ಪತಂಜಲಿ ತನ್ನ ಜನಪ್ರಿಯ ಉತ್ಪನ್ನಗಳಲ್ಲಿ ಒಂದರ ಬಗ್ಗೆ ಅವಹೇಳನಕಾರಿ ಜಾಹೀರಾತುಗಳನ್ನು ನೀಡುತ್ತಿದೆ ಎಂದು ಆರೋಪಿಸಿ ಡಾರ್ಬದ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಜಾಹೀರಾತಿನಲ್ಲಿ, ಪತಂಜಲಿ ಆಯುರ್ವೇದ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಪ್ರಕಾರ ಚ್ಯವನ್‌ಸ್ಪ್ರಾಶ್‌ ತಯಾರಿಸಿದ ಏಕೈಕ ಸಂಸ್ಥೆ ಎಂದು ಹೇಳಿಕೊಂಡಿದ್ದು, ಡಾಬನರ್ ನಂತಹ ಇತರ ಬ್ರ್ಯಾಂಡ್ಗಳಿಗೆ ಅಧಿಕೃತ ಜ್ಞಾನದ ಕೊರತೆಯಿದೆ ಎಂದು ಸೂಚಿಸುತ್ತದೆ ಎಂದು ಆರೋಪಿಸಲಾಗಿತ್ತು. ಈ ಜಾಹೀರಾತುಗಳಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿ ಡಾರ್ಬರ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಿ, ಬ್ರ್ಯಾಂಡ್‌ನ ಖ್ಯಾತಿಗೆ ಉಂಟಾದ ಹಾನಿಗೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಕೋರಲಾಗಿತ್ತು.

ಪತಂಜಲಿಯ ಚ್ಯವಸ್ಪ್ರಾಶ್‌ ಮಾತ್ರ ನಿಜವಾದ ಉತ್ಪನ್ನ ಎಂದು ಜಾಹೀರಾತು ತಪ್ಪಾಗಿ ಹೇಳಿಕೊಂಡಿದೆ ಎಂದು ಡಾರ್ಬ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಇದಲ್ಲದೆ, ಪತಂಜಲಿಯು 40-ಮೂಲಿಕೆಗಳ ಚ್ಯವನ್ಪ್ರಾಶ್‌ ಅನ್ನು ಸಾಮಾನ್ಯ ಎಂದು ಕರೆದಿರುವ ಜಾಹೀರಾತುಗಳಲ್ಲಿನ ನಿರ್ದಿಷ್ಟ ಉಲ್ಲೇಖಗಳನ್ನು ಡಾರ್ಬರ್‌ ಆಕ್ಷೇಪ ವ್ಯಕ್ತಪಡಿಸಿತ್ತು.

ಅಂತಹ ಜಾಹೀರಾತುಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ ಮತ್ತು ಕಟ್ಟುನಿಟ್ಟಾದ ನಿಯಂತ್ರಕ ಮಾನದಂಡಗಳಿಂದ ನಿಯಂತ್ರಿಸಲ್ಪಡುವ ಉತ್ಪನ್ನಗಳ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ ಎಂದು ಡಾರ್ಬರ್‌ ತನ್ನ ಅರ್ಜಿಯಲ್ಲಿ ಮನವಿ ಮಾಡಿಕೊಂಡಿತ್ತು. ಈ ಅರ್ಜಿಯ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.

ಪತಂಜಲಿ ಕಂಪನಿಯು ಜಾಹೀರಾತುಗಳನ್ನು ತೆಗೆದು ಹಾಕಲು ಕೇಳಲಾದ ಏಕೈಕ ಪ್ರಕರಣ ಇದಲ್ಲ. ಇದಕ್ಕೂ ಮೊದಲು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಪ್ರಕರಣದಲ್ಲಿ, ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಇತರ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸಲು ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರು ನೀಡಿದ ಭರವಸೆಗಳನ್ನು ಸ್ವೀಕರಿಸಿದ ನಂತರ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿತ್ತು.

ಪತಂಜಲಿ ಸಂಸ್ಥೆಯು ಕೋವಿಡ್‌ ಲಸಿಕೆ ಅಭಿಯಾನ ಮತ್ತು ಆಧುನಿಕ ಔಷಧದ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿ ಐಎಂಎ ಪತಂಜಲಿ ವಿರುದ್ಧ ಪ್ರಕರಣ ದಾಖಲಿಸಿದೆ.ಇಡೀ ದೇಶವನ್ನು ಇಂತಹ ದಾರಿತಪ್ಪಿಸುವ ಜಾಹೀರಾತುಗಳ ಮೂಲಕ ಮೋಸ ಮಾಡಲಾಗುತ್ತಿದೆ ಎಂದು ನ್ಯಾಯಾಲಯವು ಪತಂಜಲಿ ಆಯುರ್ವೇದವು ತಯಾರಿಸಿದ ಔಷಧಿಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತನ್ನು ಪ್ರಕಟಿಸದಂತೆ ನಿರ್ದೇಶಿಸಿತ್ತು.

RELATED ARTICLES

Latest News