Friday, July 4, 2025
Homeರಾಜ್ಯಸಾಲಬಾಧೆಯಿಂದ ಮನನೊಂದ ರೈತ ಹೊಳೆಗೆ ಹಾರಿ ಆತ್ಮಹತ್ಯೆ

ಸಾಲಬಾಧೆಯಿಂದ ಮನನೊಂದ ರೈತ ಹೊಳೆಗೆ ಹಾರಿ ಆತ್ಮಹತ್ಯೆ

Farmer, upset over debt, commits suicide

ಮೈಸೂರು,ಜು.3- ಸಾಲ ಬಾಧೆಯಿಂದ ಮನನೊಂದ ರೈತಯೊಬ್ಬರು ತುಂಬಸೋಗೆ ಸೇತುವೆಯಿಂದ ಹೊಳೆಗೆ ಹಾರಿ ಆತಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಮುಳ್ಳೂರು ಗ್ರಾಮ ನಿವಾಸಿ ಗೋವಿಂದನಾಯಕ (50) ಮೃತಪಟ್ಟಿರುವ ವ್ಯಕ್ತಿ.

ಗೋವಿಂದನಾಯಕ ಸುಮಾರು 25 ವರ್ಷಗಳ ಹಿಂದೆ ಹೆಗ್ಗಡಪುರ ಗ್ರಾಮದಲ್ಲಿ ವಾಸವಾಗಿದ್ದು.ಇವರು ಕೆಲಸ ಮುಗಿಸಿಕೊಂಡು ಜಾನುವಾರುಗಳಿಗೆ 8 ಗಂಟೆ ಸಮಯಕ್ಕೆ ಹುಲ್ಲನ್ನು ತರುತ್ತೇನೆ ಎಂದು ಹೇಳಿ ಹೊರಗೆ ಹೋದವರು 11 ಗಂಟೆಯಾದರೂ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು.

ನೇರವಾಗಿ ತಾಲೂಕಿನ ಸಮೀಪದ ತುಂಬಸೋಗೆ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಹೊಳೆಯ ಮೇಲೆ ತನ್ನ ಸ್ಕೂಟರ್‌ನಲ್ಲಿ ತುಂಬಸೋಗೆ ಗ್ರಾಮದಲ್ಲಿರುವ ಸೇತುವೆ ಬಳಿ ತೆರಳಿದ ಅವರು, ಸೇತುವೆಯಲ್ಲಿಯೇ ಸ್ಕೂಟರ್‌ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News