Saturday, July 5, 2025
Homeಬೆಂಗಳೂರುಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು

ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು

BBMP personnel who assaulted homeowner suspended

ಬೆಂಗಳೂರು, ಜು. 3- ಒಳ ಮೀಸಲಾತಿ ಸ್ಟಿಕರ್‌ ಅಳವಡಿಕೆ ಸಂದರ್ಭದಲ್ಲಿ ಮನೆ ಮಾಲಿಕರ ಮೇಲೆ ಹಲ್ಲೆ ನಡೆಸಿದ್ದ ಮೂವರು ಬಿಬಿಎಂಪಿ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕಂದಾಯ ವಸೂಲಿಗಾರರಾದ ಸೇಂದಿಲ್‌ ಕುಮಾರ್‌, ಪೆದ್ದರಾಜು ಹಾಗೂ ರೆವಿನ್ಯೂ ಇನ್‌್ಸಪೆಕ್ಟರ್‌ ರಮೇಶ್‌ ಅಮಾನತುಗೊಂಡ ಬಿಬಿಎಂಪಿ ನೌಕರರಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳಮೀಸಲಾತಿ ಸಮೀಕ್ಷೆ ವೇಳೆ ಚಿಕ್ಕಕಲ್ಲಸಂದ್ರ ವಾರ್ಡ್‌ನ ಸಾರ್ವಭೌಮನಗರದಲ್ಲಿ ಬೇಕಾಬಿಟ್ಟಿ ಸ್ಟಿಕ್ಕರ್‌ ಅಂಟಿಸಿದ್ದೇ ಅಲ್ಲದೆ ಅದನ್ನು ಪ್ರಶ್ನಿಸಿದ್ದ ಮನೆ ಮಾಲೀಕ ನಂದೀಶ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು.

ಬಿಬಿಎಂಪಿ ಸಿಬ್ಬಂದಿಗಳ ಈ ಹಲ್ಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಆದೇಶ ಹೊರಡಿಸಿದ್ದಾರೆ.

RELATED ARTICLES

Latest News