Friday, July 4, 2025
Homeರಾಜ್ಯಬೈಕ್‌ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು

ಬೈಕ್‌ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು

Yoga Guru Vachananda's Brother Dies in Bike Accident

ಚಿಕ್ಕೋಡಿ,ಜು.3– ಬೈಕ್‌ ಅಪಘಾತದಲ್ಲಿ ಯೋಗ ಗುರು ಹಾಗೂ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರ ಸಹೋದರ ಸಾವನ್ನಪಿರುವ ಘಟನೆ ಅಥಣಿ ಸಮೀಪದ ಭರಮೋಕೋಡಿ ಬಳಿ ನಡೆದಿದೆ.ಮೃತರನನ್ನು ಅಶೋಕ್‌ ಗೌರಗೊಂಡ ಎಂದು ಗುರುತ್ತಿಸಲಾಗಿದೆ.

ಅಥಣಿ ತಾಲೂಕಿನ ತಾಂವಸಿ ಮೂಲದ ಅಶೋಕ್‌ ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಸಾಗುವಾಗ ಭರಮೋ ಕೋಡಿ ಬಳಿ ಈ ಅಪಘಾತ ಸಂಭವಿಸಿದೆ. ನಾಯಿ ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಅಶೋಕ್‌ ಅವರು ತಾಯಿ ಹೆಂಡತಿ ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸಾಮಾಜಿಕ ಕಳಕಳಿಯ ಮೂಲಕ ಎಲ್ಲರ ಮನ ಗೆದ್ದು, ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗ ಹೋದಿದ್ದರು ಎಂದು ಗ್ರಾಮಸ್ಥರು ಕಂಬನಿ ಮಡಿದಿದ್ದಾರೆ. ಸ್ವಗ್ರಾಮ ತಾವಂಶಿಯಲ್ಲಿ ಅವರ ಅಂತ್ಯಕ್ರಿಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

RELATED ARTICLES

Latest News