ತುಮಕೂರು, ಜು.4 – ನಾಗಾಲೋಟದಲ್ಲಿ ಸಾಗುತ್ತಿದ್ದ ಕೊಬ್ಬರಿ ಬೆಲೆ ನಿನ್ನೆ ದಿಢೀರನೇ ಕ್ವಿಂಟಾಲ್‌ಗೆ 5 ಸಾವಿರ ಇಳಿಕೆಯಾಗಿದ್ದು, ಬೆಳೆಗಾರರು ಹಾಗೂ ವ್ಯಾಪಾರಿಗಳಲ್ಲಿ ಗೊಂದಲ ಮೂಡಿಸಿದೆ.
ಕಳೆದ ಸೋಮವಾರ ಕ್ವಿಂಟಾಲ್‌ಗೆ 30 ಸಾವಿರ ರೂ.ವರೆಗೂ ಹರಾಜಾಗುವ ಮೂಲಕ ದಾಖಲೆ ಬರೆದಿದ್ದ ಬೆಲೆ ಮೂರೇ ದಿನದಲ್ಲೇ 5 ಸಾವಿರ ರೂ. ಕುಸಿತ ಕಂಡಿದೆ.ನಿನ್ನೆ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 28 ಸಾವಿರ ರೂ.ವಿನಿಂದ ಕನಿಷ್ಠ 24 ಸಾವಿರ ರೂ.ವರೆಗೆ ಹರಾಜಾಗಿದೆ.
ಬೆಲೆ ಹೆಚ್ಚಾದ ಕೂಡಲೇ ರೈತರು ಒಮ್ಮೆಲೆ ಕೊಬ್ಬರಿ ಸುಲಿದು ಮಾರುಕಟ್ಟೆಗೆ ತಂದಿದ್ದರಿಂದ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ತಿಪಟೂರು ಎಪಿಎಂಸಿಯಲ್ಲಿ ಪ್ರತಿ ಸೋಮವಾರ ಹಾಗೂ ಗುರುವಾರ ಟೆಂಡರ್ ನಡೆಯುತ್ತಿದ್ದು, ಮುಂದಿನ ಸೋಮವಾರ ಹರಾಜಿನಲ್ಲಿ ಕೊಬ್ಬರಿ ದರ ಎಷ್ಟಕ್ಕೆ ಮಾರಾಟವಾಗುತ್ತದೆ ಎಂಬುದು ನಿಖರವಾಗಲಿದೆ.
ಇದೇ ರೀತಿ ಕೊಬ್ಬರಿ ದರ ಇಳಿಕೆ ಮುಂದುವರೆದರೆ ಬೆಳೆಗಾರರು ಹಾಗೂ ಮಾರಾಟಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.ಇನ್ನೂ ಬೆಲೆ ಹೆಚ್ಚಾಗಲಿದೆ ಎಂದು ವರ್ತಕರು ಅಪಾರ ಪ್ರಮಾಣದಲ್ಲಿ ಕೊಬ್ಬರಿಯನ್ನು ಖರೀದಿ ಮಾಡಿ ದಾಸ್ತಾನು ಮಾಡಿದ್ದಾರೆ.
ಒಂದು ವೇಳೆ ಇಳಿಕೆಯತ್ತ ಸಾಗಿದರೆ ಭಾರೀ ನಷ್ಟವಾಗಲಿದೆ.ರೈತರು ಕೂಡ ಬೆಲೆ ಹೆಚ್ಚಾಗಬಹುದೆಂದು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದರು.ಈಗ ಕೈಸುಟ್ಟುಕೊಳ್ಳುವಂತಾಗಿದೆ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.
- ಶಾಸಕ ಮುನಿರತ್ನ ಕಾಲೆಳೆದ ಡಿಸಿಎಂ ಡಿಕೆಶಿ
- ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಜಗದೀಶ್ ವಿರುದ್ಧ ದೂರು
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದ ಶಕ್ತಿ ಯೋಜನೆ
- ಮಳೆಗೆ ಮುಂಬೈ ಚಿತ್ : ರೈಲು, ವಾಹನ ಸಂಚಾರ ಸ್ಥಗಿತ
- ಮಾದಕ ವಸ್ತು ನಿರ್ಮೂಲನೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ :ಸೀಮಂತ್ಕುಮಾರ್ ಸಿಂಗ್ ಮನವಿ