Saturday, July 5, 2025
Homeಬೆಂಗಳೂರುಮುದ್ದೆ ಕೋಲು ನಿಂದ ಹೊಡೆದು ಪತಿಯನ್ನು ಕೊಂದ ಪತ್ನಿ

ಮುದ್ದೆ ಕೋಲು ನಿಂದ ಹೊಡೆದು ಪತಿಯನ್ನು ಕೊಂದ ಪತ್ನಿ

Wife kills husband by beating him with a wooden stick

ಬೆಂಗಳೂರು,ಜು.4-ಮದ್ಯ ಸೇವಿಸಿ ಮನೆಗೆ ಬಂದ ಪತಿ ಜೊತೆ ಜಗಳವಾಡಿದ ಪತ್ನಿ ಮುದ್ದೆಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸುದ್ದಗುಂಟೆ ಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್‌‍ಜಿ ಪಾಳ್ಯದ ಚಂದ್ರೋದಯ ಕಲ್ಯಾಣ ಮಂಟಪ ಸಮೀಪದ ನಿವಾಸಿ ಬಾಸ್ಕರ್‌ (42) ಎಂಬುವವರೇ ಪತ್ನಿ ಶೃತಿ (32)ಯಿಂದಲೇ ಕೊಲೆಯಾದ ದುರ್ದೈವಿ.ಬಾಸ್ಕರ್‌ ರವರು 12 ವರ್ಷದ ಹಿಂದೆ ಶೃತಿ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಜೂ.27ರಂದು ರಾತ್ರಿ ಬಾಸ್ಕರ್‌ ಅವರು ಮದ್ಯೆ ಸೇವಿಸಿ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ದಂಪತಿ ನಡುವೆ ಜಗಳವಾಗಿದೆ. ಕೋಪದಲ್ಲಿ ಶೃತಿ ಮುದ್ದೆಕೋಲಿನಿಂದ ಹೊಡೆದಿದ್ದು, ನಂತರ ಮಲಗಿದ್ದ ಬಾಸ್ಕರ್‌ ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಎಸ್‌‍ಜಿ ಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ರಾತ್ರಿ ಮನೆಗೆ ಬಂದು ಮಲಗಿದ್ದಾಗ ಪತಿ ಸಾವನ್ನಪ್ಪಿದ್ದಾರೆಂದು ಪೊಲೀಸರ ಮುಂದೆ ಶೃತಿ ಹೇಳಿದ್ದಾಳೆ.
ಪೊಲೀಸರು ಯುಡಿಆರ್‌ ಪ್ರಕರಣ ದಾಖಲಿಸಿಕೊಂಡು ಬಾಸ್ಕರ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈಸೇರಿದ್ದು, ಅದರಲ್ಲಿ ಬಾಸ್ಕರ್‌ ಅವರ ಮೇಲೆ ಹಲ್ಲೆ ನಡೆದಿರುವುದು ಗೊತ್ತಾಗಿದೆ.

ನಂತರ ಪೊಲೀಸರು ತನಿಖೆ ಮುಂದುವರೆಸಿ ಶೃತಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಶೃತಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News