Saturday, July 5, 2025
Homeಅಂತಾರಾಷ್ಟ್ರೀಯ | Internationalಅಮೆರಿಕಾದ ಟೆಕ್ಸಾಸ್‌‍ನಲ್ಲಿ ಭಾರೀ ಮಳೆ, 24 ಮಂದಿ ಸಾವು

ಅಮೆರಿಕಾದ ಟೆಕ್ಸಾಸ್‌‍ನಲ್ಲಿ ಭಾರೀ ಮಳೆ, 24 ಮಂದಿ ಸಾವು

Texas flash floods kill at least 24 people, 23 girl campers missing

ಕೆರ್ವಿಲ್ಲೆ, (ಅಮೆರಿಕ)ಜು.5- ಟೆಕ್ಸಾಸ್‌‍ನ ಗುಡ್ಡ ಗಾಡು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ 24 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ. ನೀರಿನಲಿ ಪ್ರವಾಹದಲ್ಲಿ ಪ್ರವಾಸಕ್ಕೆ ಬಂದಿದ್ದ 20 ಯುವತೀಯರು ಕೊಚ್ಚಿ ಹೋಗಿದ್ದು, ಹೆಲಿಕಾಪ್ಟರ್‌ ಹಾಗು ದೋಣಿಯಲ್ಲಿ ಅಗ್ನಿಶಾಮಕ ಸಿಬ್ಭಂದಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಕೆರ್‌ಕೌಂಟಿಯಲ್ಲಿ ರಾತ್ರಿಯಿಡಿ ಸುಮಾರು 25 ಸೆಂಟಿಮೀಟರ್‌ ಮಳೆ ಸುರಿದಿದ್ದು, ಗ್ವಾಡಾಲುಪೆ ನದಿಯಲ್ಲಿ ಹಠಾತ್‌ ಪ್ರವಾಹ ಉಂಟಾಗಿದೆ. ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್‌‍ ಮುಖ್ಯಸ್ಥ ಲ್ಯಾರಿ ಲೀಥಾ ಅವರು ಮಳೆ ಅನಾಹುತದಲ್ಲಿ 24 ಜನರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.ಹೆಲಿಕಾಪ್ಟರ್‌ ಮೂಲಕ 167 ಜನರು ಸೇರಿದಂತೆ ಒಟ್ಟು 237 ಜನರನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ,ಈ ನಡುವೆ ಕಾಣೆಯಾದವ ನಿರ್ದಿಷ್ಟ ಸಂಖ್ಯೆ ಗೊತ್ತಾಗುತ್ತಲ್ಲ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಒಂಬತ್ತು ರಕ್ಷಣಾ ತಂಡಗಳು, 14 ಹೆಲಿಕಾಪ್ಟರ್‌ಗಳು ಮತ್ತು 12 ಡ್ರೋನ್‌ಗಳನ್ನು ಬಳಸಲಾಗುತ್ತಿತ್ತು, ಕೆಲವು ಜನರನ್ನು ಮರಗಳಿಂದ ರಕ್ಷಿಸಲಾಯಿತು ಎಂದು ತಿಳಿಸಿದ್ದಾರೆ.

ರಣಭೀಕರ ಮಳೆ ,ಬಿರುಗಾಳಿಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಹಲವಾರು ಮನೆಗಳು ನಾಶಗೊಂಡಿದೆ ರಕ್ಷಣಾ ಕಾರ್ಯಾಚರಣೆ ಬೆಳಿಗ್ಗೆ ತೀವ್ರಗೊಂಡಿದ್ದು ರಾತ್ರಿ ನಾವು ನೋಡಿದ ಭಯಾನಕ ದೃಶ್ಯ ಆತಂಕ ಮೂಡಿಸಿದೆ ಎಂದು ಸಾಮಾಜಿಕ ತಾಣದಲ್ಲಿ ಅಲ್ಲಿದ್ದವರು ತಿಳಿಸಿದ್ದಾರೆ.

RELATED ARTICLES

Latest News