Sunday, July 6, 2025
Homeಬೆಂಗಳೂರುಬೆಂಗಳೂರು : ಮಾರ್ಗಮಧ್ಯೆ ಪ್ರಯಾಣಿಕನನ್ನು ಬೆದರಿಸಿ ಹಣ-ಮೊಬೈಲ್‌ ಸುಲಿಗೆ ಮಾಡಿದ ಆಟೋ ಚಾಲಕ

ಬೆಂಗಳೂರು : ಮಾರ್ಗಮಧ್ಯೆ ಪ್ರಯಾಣಿಕನನ್ನು ಬೆದರಿಸಿ ಹಣ-ಮೊಬೈಲ್‌ ಸುಲಿಗೆ ಮಾಡಿದ ಆಟೋ ಚಾಲಕ

Bengaluru: Auto driver threatens passenger and extorts on the way

ಬೆಂಗಳೂರು,ಜು.5– ಆಟೋದಲ್ಲಿ ಡ್ರಾಪ್‌ ಕೊಡುವುದಾಗಿ ಹೇಳಿ ಪ್ರಯಾಣಿಕನನ್ನು ಹತ್ತಿಸಿಕೊಂಡ ಚಾಲಕ ಮಾರ್ಗಮಧ್ಯೆ ಬೆದರಿಸಿ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿರುವ ಘಟನೆ ಶೇಷಾದ್ರಿಪುರಂ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಉತ್ತರ ಪ್ರದೇಶ ಮೂಲದ ಆಸೀಫ್‌ ಎಂಬುವವರು ರೈಲಿನಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಗರಕ್ಕೆ ಬಂದಿದ್ದಾರೆ.ಜೆಪಿನಗರಕ್ಕೆ ಹೋಗಲು ಮೆಜೆಸ್ಟಿಕ್‌ನಲ್ಲಿ ಆಸೀಫ್‌ ಆಟೋ ಹತ್ತಿದ್ದಾರೆ.

ಚಾಲಕ ಅವರನ್ನು ಶೇಷಾದ್ರಿಪುರಂನ ಪ್ಲಾಟ್‌ಫಾರಂ ರಸ್ತೆಯ ನಿರ್ಜನ ಪ್ರದೇಶದ ಬಳಿ ಕರೆದುಕೊಂಡು ಬಂದು ಪ್ರಯಾಣಿಕನಿಗೆ ಬೆದರಿಸಿ ಅವರ ಬಳಿ ಇದ್ದ 2 ಸಾವಿರ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡಿ, ಪ್ರಯಾಣಿಕನನ್ನು ಆಟೋದಿಂದ ಇಳಿಸಿ ಪರಾರಿಯಾಗಿದ್ದಾನೆ. ಮುಂದೇನು ಮಾಡುವುದೆಂದು ತೋಚದೆ ಆಸೀಫ್‌ ಶೇಷಾದ್ರಿಪುರಂ ಪೊಲೀಸ್‌‍ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸಿ ಆಟೋ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News