Saturday, July 5, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಪ್ರೀತಿ ವಿಷಯಕ್ಕೆ ಶಿಕ್ಷಕಿಯನ್ನು ಇರಿದು ಕೊಂದ ಯುವಕ

ಪ್ರೀತಿ ವಿಷಯಕ್ಕೆ ಶಿಕ್ಷಕಿಯನ್ನು ಇರಿದು ಕೊಂದ ಯುವಕ

Youth stabs teacher to death over love affair

ಮೈಸೂರು, ಜು.5- ಯುವಕನೊಬ್ಬ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಆಕೆ ಸಾವನ್ನಪ್ಪಿರುವ ಘಟನೆ ನಗರದ ಅಶೋಕಪುರಂನಲ್ಲಿ ನಡೆದಿದೆ.ಪಾಂಡವಪುರದ ಎಲೆಕೆರೆ ಹ್ಯಾಂಡ್‌ ಪೋಸ್ಟ್ ನಿವಾಸಿ ಪೂರ್ಣಿಮಾ (36) ಕೊಲೆಗೀಡಾದ ಶಿಕ್ಷಕಿ.

ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್‌ ಪ್ರೀತಿಯ ವಿಷಯಕ್ಕೆ ಶಿಕ್ಷಕಿ ಪೂರ್ಣಿಮಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಶಿಕ್ಷಕಿಯನ್ನು ಆತನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಆಕೆಗೆ ತಾಳಿ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಚಾಕು ಇರಿತದಿಂದ ಗಾಯಗೊಂಡಿದ್ದ ಶಿಕ್ಷಕಿ ಪೂರ್ಣಿಮಾ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಗರದ ಅಶೋಕಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News