ಕೆರ್ವಿಲ್ಲೆ,ಜು.6 – ಅಮೆರಿದ ಟೆಕ್ಸಾಸ್‌ನಲ್ಲಿ ಕಂಡರಿಯದಂತೆ ಸುರಿದ ಬಾರಿ ಮಳೆ, ಗಾಳಿಗೆ ಹಲವು ಪ್ರದೇಶಗಳು ಧ್ವಂಸಗೊಂಡಿದ್ದು, ದುರಂತದಲ್ಲಿ ಮೃತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.ಹಠಾತ್ ಪ್ರವಾಹದಲ್ಲಿ ಇನ್ನು 27 ಬಾಲಕಿಯರು ಸೇರಿದಂತೆ ಹಲವಾರು ಮಂದಿ ಕೊಚ್ಚಿ ಹೋಗಿದ್ದು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ರಕ್ಷಣಾ ತಂಡವು ನಿರತವಾಗಿದೆ.
ಕೇಂದ್ರ ಟೆಕ್ಸಾಸ್‌ನ ಹಲವು ಪ್ರದೇಸ ಧ್ವಂಸಗೊಂಡಿದ್ದು, ಬಡಮೇಲಾಗಿರುವ ಮರಗಳು, ಉರುಳಿಬಿದ್ದ ಕಾರುಗಳು ಮತ್ತು ಕೆಸರು ತುಂಬಿದ ಭಗ್ನಾವಶೇಷ ಕಾಣುತ್ತಿದೆ. ಕೆರ್ ಕೌಂಟಿಯಲ್ಲೇ 15 ಮಕ್ಕಳು ಸೇರಿದಂತೆ ಕನಿಷ್ಠ 43 ಜನರನ್ನು ಬಲಿಯಾಗಿದ್ದಾರೆ.
ನದಿಯ ಉದ್ದಕ್ಕೂ ಇರುವ ಕ್ರಿಶ್ಚಿಯನ್ ಬೇಸಿಗೆ ಶಿಬಿರವಾದ ಕ್ಯಾಂಪ್ ಮಿಸ್ಟಿಕ್‌ನಲ್ಲಿ ಮಕ್ಕಳನ್ನು ಹೊರತುಪಡಿಸಿ ಎಷ್ಟು ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಇನ್ನೂ ಹೇಳಿಲ್ಲ. ಬೆಳಗಿನ ಜಾವ ಕೇವಲ 45 ನಿಮಿಷಗಳಲ್ಲಿ ಗ್ಲಾಡಾಲುಪೆ ನದಿಯಲ್ಲಿ ವಿನಾಶಕಾರಿ, ವೇಗವಾಗಿ ಚಲಿಸುವ ನೀರಿನ ರಭಸಕ್ಕೆ ಮನೆಗಳು ಮತ್ತು ವಾಹನಗಳು ಕೊಚ್ಚಿಹೋದವು.
ಸ್ಯಾನ್ ಆಂಟೋನಿಯೊದಲ್ಲಿ ಮಳೆ ಮುಂದುವರೆದಿದ್ದರಿಂದ ಹಠಾತ್ ಪ್ರವಾಹ ಎಚ್ಚರಿಕೆ ನಡುವೆಯೂ ಅಪಾಯ ಕಡಿಮೆಯಾಗಿರಲಿಲ್ಲ, ಹೆಲಿಕಾಪ್ಟರ್‌ಗಳು, ದೋಣಿಗಳು ಮತ್ತು ಡೋನ್‌ಗಳನ್ನು ಬಳಸಿಕೊಂಡು ನಾಪತ್ತೆಯಾದವರ ಹುಡುಕುತ್ತಿದ್ದಾರೆ. ಅಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ ಎಂದು ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದಾರೆ. ಇಂದು ಭಾನುವಾರ ರಾಜ್ಯಕ್ಕಾಗಿ ಪ್ರಾರ್ಥನೆಯ ದಿನವೆಂದು ಘೋಷಿಸಿದ್ದಾರೆ.
ಪ್ರತಿಯೊಬ್ಬ ಟೆಕ್ಸಾಸ್ ನಿವಾಸಿಯೂ ನನ್ನೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಬೇಕೆಂದು ನಾನು ಕೋರುತ್ತೇನೆ. ಕಳೆದುಹೋದ ಜೀವಗಳಿಗಾಗಿ, ಇನ್ನೂ ಕಾಣೆಯಾದವರಿಗಾಗಿ, ನಮ್ಮ ಸಮುದಾಯಗಳ ಚೇತರಿಕೆಗಾಗಿ ಮತ್ತು ಮುಂಚೂಣಿಯಲ್ಲಿರುವವರ ಸುರಕ್ಷತೆಗಾಗಿ ಎಂದು ಬಾವುಕರಾಗಿದ್ದಾರೆ.
ಮಧ್ಯ ಟೆಕ್ಸಾ ಸ್‌ನ ಗ್ವಾಡಾಲುಪೆ ನದಿಯ ಉದ್ದಕ್ಕೂ ಇರುವ ಬೆಟ್ಟಗಳು ಶತಮಾನಗಳಷ್ಟು ಹಳೆಯದಾದ ಯುವ ಶಿಬಿರಗಳಿವೆ, ಅಲ್ಲಿ ತಲೆಮಾರುಗಳ ಕುಟುಂಬಗಳು ಈಜಲು ಮತ್ತು ಹೊರಾಂಗಣದಲ್ಲಿ ಆನಂದಿಸಲು ಬಂದಿವೆ. ಜುಲೈ ರಜಾದಿನದ ಸುತ್ತ ಈ ಪ್ರದೇಶವು ವಿಶೇಷವಾಗಿ ಜನಪ್ರಿಯವಾಗಿದೆ, ಇದರಿಂದಾಗಿ ಎಷ್ಟು ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿಯುವುದು ಹೆಚ್ಚು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಶಿವಮೊಗ್ಗದಲ್ಲಿ ಗಣೇಶ ಮೂರ್ತಿಗೆ ಕಾಲಿನಿಂದ ಒದ್ದು, ನಾಗನ ವಿಗ್ರಹ ಚರಂಡಿಗೆಸೆದು ವಿಕೃತಿ ಮೆರೆದ ಕಿಡಿಗೇಡಿಗಳು : ಭಾರಿ ಆಕ್ರೋಶ
- ನಿವೃತ್ತ CJI ಚಂದ್ರಚೂಡ್ ವಾಸವಿರುವ ನಿವಾಸವನ್ನು ತಕ್ಷಣವೇ ನಿವಾಸ ಖಾಲಿ ಮಾಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಪತ್ರ
- ಇಸ್ರೇಲ್-ಇರಾನ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿ ಖಮೇನಿ
- ದಲೈಲಾಮಾ ಅವರ 90ನೇ ಹುಟ್ಟುಹಬ್ಬ : ಶುಭಾಶಯ ಕೋರಿದ ಪ್ರಧಾನಿ ಮೋದಿ
- ತುಮಕೂರು : ಖಾಸಗಿ ಹೋಟೆಲ್ನಲ್ಲಿ ದಾವಣಗೆರೆಯ ಪಿಎಸ್ಐ ಆತ್ಮಹತ್ಯೆ