Monday, July 7, 2025
Homeಬೆಂಗಳೂರುಬೆಂಗಳೂರಲ್ಲಿ ಎರಡು ಕಡೆ ಮೊಬೈಲ್ ದರೋಡೆ

ಬೆಂಗಳೂರಲ್ಲಿ ಎರಡು ಕಡೆ ಮೊಬೈಲ್ ದರೋಡೆ

Mobile robbery in two places in Bengaluru

ಬೆಂಗಳೂರು, ಜು.6– ನಗರದಲ್ಲಿ ಆಗಾಗ್ಗೆ ಮೊಬೈಲ್ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಕಳೆದ ರಾತ್ರಿ ಎರಡು ಕಡೆ ದರೋಡೆಗಳು ಆಗಿವೆ.ರಾತ್ರಿ ಸುಮಾರು 9 ಗಂಟೆ ಸಂದರ್ಭದಲ್ಲಿ ಆದರ್ಶ್ ಎಂಬುವವರು ಕಾಮತ್ ಹೋಟೆಲ್ ಮುಂಭಾಗ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಅವರ ಮೊಬೈಲ್ ಕಸಿದುಕೊಂಡುಪರಾರಿಯಾಗಿದ್ದಾರೆ. ಈ ಬಗ್ಗೆ ಅವರು ವಿವಿ ಪುರಂ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.

ಸೀತಾರಾಮ ಪಾಳ್ಯದಲ್ಲಿ ವ್ಯಕ್ತಿಯೊಬ್ಬರು ರಾತ್ರಿ ಸುಮಾರು 12.30ರ ಸಮಯದಲ್ಲಿ ನಡೆದು ಮನೆಗೆ ಹೋಗುತ್ತಿದ್ದ ವೇಳೆ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡ ಬಂದ ದರೋಡೆಕೋರರು ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.

ಮೊಬೈಲ್ ಕಳೆದುಕೊಂಡ ವ್ಯಕ್ತಿ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ರಸ್ತೆಗಳಲ್ಲಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News