Monday, July 7, 2025
Homeರಾಷ್ಟ್ರೀಯ | Nationalತುಮಕೂರು : ಖಾಸಗಿ ಹೋಟೆಲ್‌ನಲ್ಲಿ ದಾವಣಗೆರೆಯ ಪಿಎಸ್‌‍ಐ ಆತ್ಮಹತ್ಯೆ

ತುಮಕೂರು : ಖಾಸಗಿ ಹೋಟೆಲ್‌ನಲ್ಲಿ ದಾವಣಗೆರೆಯ ಪಿಎಸ್‌‍ಐ ಆತ್ಮಹತ್ಯೆ

Tumkur: Davangere PSI commits suicide in private hotel

ತುಮಕೂರು,ಜು.6- ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ದಾವಣಗೆರೆಯ ಪಿಎಸ್‌‍ಐ ಒಬ್ಬರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನಾಗರಾಜಪ್ಪ(58) ಆತಹತ್ಯೆಮಾಡಿಕೊಂಡ ಪಿಎಸ್‌‍ಐ ಎಂದು ಗುರುತಿಸಲಾಗಿದೆ.

ಜು.1ರಂದು ರಾತ್ರಿ ನಗರಕ್ಕೆ ಬಂದು ಎಂ.ಜಿ.ರಸ್ತೆಯಲ್ಲಿರುವ ದ್ವಾರಕ ಹೋಟೆಲ್‌ ಅಂಡ್‌ ಲಾಡ್‌್ಜನಲ್ಲಿ ರೂಮ್‌ ಬಾಡಿಗೆ ಪಡೆದು ಅಲ್ಲಿಯೇ ತಂಗಿದ್ದರು. ಆದರೆ ಇದ್ದಕ್ಕಿದ್ದಂತೆ ನೇಣುಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ರೂಮ್‌ ಸೇರಿದ ವ್ಯಕ್ತಿ ನಾಲ್ಕು ದಿನಗಳಾದರೂ ರೂಮ್‌ನಿಂದ ಆಚೆ ಬಂದಿರಲಿಲ್ಲ. ದೂರವಾಣಿ ಕರೆ ಮಾಡಿದರ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ರೂಮ್‌ ಸ್ವಚ್ಚಗೊಳಿಸಲು ತೆರಳಿದಾಗ ಕೆಟ್ಟ ವಾಸನೆ ಬಂದಿದೆ. ಕೂಡಲೇ ಲಾಡ್‌್ಜ ಮಾಲೀಕರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ರೂಮ್‌ ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ನಗರ ಠಾಣೆಗೆ ಮಾಹಿತಿ ನೀಡಿದ್ದು, ಎಎಸ್‌‍ಐ ಗೋಪಾಲ್‌ ಪರಿಶೀಲನೆ ನಡೆಸಿದಾಗ ಡೆತ್‌ನೋಟ್‌ ಪತ್ತೆಯಾಗಿದೆ.

ಕೌಟುಂಬಿಕ ಕಲಹಕ್ಕೆ ಮನನೊಂದು ಆತಹತ್ಯೆ ಮಾಡಿಕೊಂಡಿರುವುದಾಗಿ ಆತಹತ್ಯೆಗೂ ಮುನ್ನ ನಾಗರಾಜಪ್ಪ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ನಾಗರಾಜಪ್ಪ ಅವರು ದಾವಣಗೆರೆಯ ಬಡಾವಣೆ ಪೊಲೀಸ್‌‍ ಠಾಣೆಯಲ್ಲಿ ಪಿಎಸ್‌‍ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News