Monday, July 7, 2025
Homeರಾಜ್ಯಶಿವಮೊಗ್ಗದಲ್ಲಿ ಗಣೇಶ ಮೂರ್ತಿಗೆ ಕಾಲಿನಿಂದ ಒದ್ದು, ನಾಗನ ವಿಗ್ರಹ ಚರಂಡಿಗೆಸೆದು ವಿಕೃತಿ ಮೆರೆದ ಕಿಡಿಗೇಡಿಗಳು :...

ಶಿವಮೊಗ್ಗದಲ್ಲಿ ಗಣೇಶ ಮೂರ್ತಿಗೆ ಕಾಲಿನಿಂದ ಒದ್ದು, ನಾಗನ ವಿಗ್ರಹ ಚರಂಡಿಗೆಸೆದು ವಿಕೃತಿ ಮೆರೆದ ಕಿಡಿಗೇಡಿಗಳು : ಭಾರಿ ಆಕ್ರೋಶ

Vandalism of Ganesha, Naga idols sparks tension in Karnataka's Shivamogga

ಶಿವಮೊಗ್ಗ,ಜು.6– ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು, ನಾಗರಕಲ್ಲನ್ನು ಜಖಂ ಮಾಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಕಿಡಿಗೇಡಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೆಹಮತ್‌ವುಲ್ಲಾ ಹಾಗೂ ಸದ್ದಾಂ ಬಂಧಿಸಿ ಕಿಡಿಗೇಡಿಗಳಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಕಿಡಿಗೇಡಿಗಳು ಮಾಡಿದ ಉದ್ಧಟತನದಿಂದಾಗಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಸಕಾಲಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ಬಂಗಾರಪ್ಪ ಬಡಾವಣೆಯ ಮುಖ್ಯ ರಸ್ತೆಯ ಬಳಿಯ ಪಾರ್ಕ್‌ ನಲ್ಲಿ ಗಣೇಶನ ಮೂರ್ತಿ ಹಾಗೂ ನಾಗರ ಕಲ್ಲನ್ನು ಪ್ರತಿಷ್ಠಾಪಿಸಲಾಗಿದೆ.

ಆದರೆ ನಿನ್ನೆ ನಿನ್ನೆಸಂಜೆ ಇಬ್ಬರು ಅನ್ಯಕೋಮಿ ಯುವಕರು ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು ಹಾಗೂ ಅಲ್ಲೇ ಇದ್ದ ನಾಗರ ಕಲ್ಲನ್ನು ಜಖಂಗೊಳಿಸಿ ಪರಾರಿಯಾಗಿದ್ದರು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುದ್ದಂತೆಯೇ ಸ್ಥಳಕ್ಕೆ ಎಸ್‌‍ಪಿ ಮಿಥುನ್‌ಕುಮಾರ್‌ ಧಾವಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು.ಸ್ಥಳಕ್ಕೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಆರೋಪಿ ವಿರುದ್ಧ ಕ್ರಮಕೈಗೊಳ್ಬೇಕು. ಇಲ್ಲಿ ಕಾನೂನುಬಾಹಿರವಾಗಿ ಕಟ್ಟಡ ಕಟ್ಟುತ್ತಿರುವ ವ್ಯಕ್ತಿ ಮೇಲೂ ಪಾಲಿಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.

ದುಷ್ಕರ್ಮಿಗಳ ಕಿಡಿಗೇಡಿತನಕ್ಕೆತೀವ್ರ ಆಕ್ರೋಶ :
ಶಿವಮೊಗ್ಗ,ಜು.6- ಸ್ಥಳೀಯವಾಗಿ ಯಾವುದೇ ಧರ್ಮಬೇಧವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಇದ್ದೇವೆ. ಆದರೆ ಹೊರಗಿನಿಂದ ಬಂದು ಇಲ್ಲಿ ಸೇರಿಕೊಂಡಿರುವವರು ಉದ್ಧಟತನದಿಂದ ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ ಬಂಗಾರಪ್ಪ ಲೇಔಟ್‌ನ ರಾಗಿಗುಡ್ಡದಲ್ಲಿ ನಡೆದ ಕಹಿ ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಥಳೀಯರು, ದುಷ್ಕರ್ಮಿಗಳ ಕಿಡಿಗೇಡಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಬ್ದುಲ್‌ ರೆಹಮತ್‌ ಉಲ್ಲಾ ಮತ್ತು ಆತನ ಸಂಗಡಿಗರು ಗಣಪತಿ ಮೂರ್ತಿ ಹಾಗೂ ನಾಗರಕಲ್ಲಿಗೆ ಅಪಚಾರ ಎಸಗಿದ್ದಾರೆ. ಅವರ ದುರ್ವರ್ತನೆ ಕಂಡು ಎಲ್ಲರೂ ಗುಂಪು ಸೇರಿದ ತಕ್ಷಣವೇ ಕಿತ್ತು ಎಸೆದಿದ್ದ ನಾಗರಕಲ್ಲನ್ನು ಯಥಾಸ್ಥಿತಿಯಲ್ಲಿಟ್ಟು ಅಲ್ಲಿಂದ ಬೈಕ್‌ನಲ್ಲಿ ಫಲಾಯನಗೈದರು ಎಂದು ತಿಳಿಸಿದ್ದಾರೆ.

ಇಲ್ಲಿ ಒಂದು ಕಟ್ಟಡದಲ್ಲಿ ಬಂದು ಸೇರಿಕೊಂಡಿರುವ ಕೆಲವು ಕಿಡಿಗೇಡಿಗಳು ರಾತ್ರಿಯೆಲ್ಲಾ ಕುಡಿದು, ಮಾದಕದ್ರವ್ಯ ಸೇವನೆ ಮಾಡಿ ಅವಾಂತರ ಸೃಷ್ಟಿಸುತ್ತಿದ್ದಾರೆ. ರಾತ್ರಿ 9 ಗಂಟೆಗೆ ಕೊನೆಯ ಬಸ್ಸಿನಲ್ಲಿ ಹೆಣ್ಣುಮಕ್ಕಳು ಸೇರಿದಂತೆ ಬಹಳಷ್ಟು ಮಂದಿ ಬರುತ್ತಾರೆ. ಕಿಡಿಗೇಡಿಗಳ ಹಾವಳಿಯಿಂದ ನೆಮದಿ ಇಲ್ಲವಾಗಿದೆ. ದುಡಿಮೆಯ ಸಲುವಾಗಿ ಹೊರಗೆ ಹೋಗುವ ಗಂಡಸರು ಮನೆಯಲ್ಲಿ ಯಾವಾಗ, ಏನಾಗುತ್ತದೆಯೋ ಎಂಬ ಆತಂಕದಲ್ಲೇ ಬದುಕಬೇಕಾದ ಸನ್ನಿವೇಶ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.

ದುಷ್ಕರ್ಮಿಗಳ ಉಪಟಳಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ನಾವು ಯಾವ ದೇಶದಲ್ಲಿ ಇದ್ದೇವೆ ಎಂಬ ಅನುಮಾನ ಬರುವಂತಾಗುತ್ತಿದೆ. ಕಳೆದ ವರ್ಷ ಎಲ್ಲರೂ ಸೇರಿಯೇ ಮೊಹರಂ ಆಚರಿಸಿದ್ದೇವೆ. ಈವರೆಗೂ ಧರ್ಮದ ವಿಚಾರವಾಗಿ ಇಲ್ಲಿರುವ ಮೂಲ ನಿವಾಸಿಗಳೊಂದಿಗೆ ಯಾವುದೇ ಸಂಘರ್ಷಗಳಾಗಿಲ್ಲ. ಈಗ ಹೊರಗಿನಿಂದ ಬಂದ ಕೆಲವರು ನಿಮ ದೇವರನ್ನು ನಾವೇಕೆ ನೋಡಬೇಕು ಎಂದು ಪ್ರಶ್ನೆ ಮಾಡಿ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ನಿನ್ನೆ ಸಂಜೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ರೀತಿಯ ವಾತಾವರಣವನ್ನು ಸರಿಪಡಿಸದೇ ಇದ್ದರೆ ನೆಮದಿಯಿಂದ ಬದುಕಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

RELATED ARTICLES

Latest News