Monday, July 7, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಗೌರಿಬಿದನೂರಲ್ಲಿ ತಡರಾತ್ರಿ ಮುಸುಕುಧಾರಿಗಳ ಓಡಾಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗೌರಿಬಿದನೂರಲ್ಲಿ ತಡರಾತ್ರಿ ಮುಸುಕುಧಾರಿಗಳ ಓಡಾಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Masked men roaming around in Gauribidanur late at night

ಗೌರಿಬಿದನೂರು,ಜು.7- ನಗರದ ವಿದ್ಯಾನಗರ ಬಡಾವಣೆಯ ಸುತ್ತಮುತ್ತಲಿನಲ್ಲಿ ತಡರಾತ್ರಿ ನಾಲ್ಕು ಮಂದಿ ಮುಸುಕುಧಾರಿಗಳು ಓಡಾಡಿರುವುದು ಸಿಸಿ ಕ್ಯಾಮಾರಗಳಲ್ಲಿ ಸೆರೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಗೌರಿಬಿದನೂರು ನಗರದಲ್ಲಿ ಶನಿವಾರ ರಾತ್ರಿ 2.30ರ ಸಮಯದಲ್ಲಿ ನಾಲ್ಕು ಮಂದಿ ಮುಸುಕುಧಾರಿಗಳು ವಿದ್ಯಾನಗರ ಬಡಾವಣೆಯ ವಿವಿಧೆಡೆಗಳಲ್ಲಿ ಓಡಾಡಿರುವ ಸಿಸಿ ಕ್ಯಾಮಾರ ದೃಶ್ಯಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಸಾರ್ವಜನಿಕರಲ್ಲಿ ಎಚ್ಚರಿಯನ್ನು ನೀಡಿದ್ದಾರೆ. ವಿದ್ಯಾನಗರ ಬಡಾವಣೆಯಲ್ಲಿ ಬಾಬಾ ಆಟೋಮೆಟಿಕ್ ಕೇಂದ್ರ ವಿಜ್ಞಾನ ಬಿ.ಎಸ್.ರಾವ್, ಕಂಟ್ರಾಕ್ಟರ್ ಬಾಬು ಎಂಬುವವ ಮನೆಯ ಮುಂದೆ ಓಡಾಡಿ ಗೇಟ್ ಬಳಿ ನಿಂತು ಮನೆಗಳನ್ನು ವೀಕ್ಷಿಸುತ್ತಿರು ದೃಶ್ಯಗಳು ಸೆರೆಯಾಗಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ಲಾಗಿದೆ.

ಬೆಚ್ಚಿ ಬಿದ್ದ ಜನತೆ:
ನಾಲ್ಕು ಮಂದಿ ಮುಸುಕು ದಾರಿಗಳು ಓಡಾಡುತ್ತಿರುವ ಚಲನವಲನಗಳನ್ನು ಗಮನಿಸಿರುವ ನಾಗರೀಕರು ಒಂದು ರೀತಿ ಬೆಚ್ಚಿಬಿದ್ದಿದ್ದಾರೆ. ಯಾವುದೇ ಆಂದ್ರದ ಗ್ಯಾಂಗ್ ಬಂದಿರಬೇಕು, ಇನ್ಯಾವುದೋ ಗ್ಯಾಂಗ್ ಬಂದಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಯಾವುದೇ ಕಳ್ಳತನ ನಡೆದಿಲ್ಲ.

ಬೀದಿನಾಯಗಳ ಎಫೆಕ್ಟ್:
ಬಡಾವಣೆಗಳಲ್ಲಿನ ಬೀದಿನಾಯಿಗಳು ಅಪರಿಚಿತ ವ್ಯಕ್ತಿಗಳನ್ನು ಕಂಡು ಒಂದೇ ಸಮನೆ ಬೊಗಳುವ ಮೂಲಕ ಅವರಿಚಿತ ವ್ಯಕ್ತಿಗಳಿಗೆ ಒಂದು ರೀತಿ ಕಳ್ಳತನ ಮಾಡುವ ವಿಫಲ ಯತ್ನವಾಗಿದೆ. ರಾತ್ರಿ ವೇಳೆಯಲ್ಲಿ ಬೀಟ್ ಪೊಲೀಸರು ಬರಬಹುದೆಂಬ ಭಯದಿಂದ ನಾಲ್ಕು ಮಂದಿ ಕಳ್ಳರು ಕಾಲ್ಕಿತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿದೆ.

ಪೊಲೀಸ್ ಅಲರ್ಟ್:
ಅಪರಿಚಿತ ಮುಸುಕುಧಾರಿಗಳು ಓಡಾಡಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ನಗರದ ಪ್ರತಿಯೊಂದು ಬಡಾವಣೆ, ತಾಲೂಕಿನ ತೋಟದ ಮನೆಗಳ ಹೆಚ್ಚುವರಿ ಪೊಲೀಸ್ ಬೀಟ್ ಹಮ್ಮಿಕೊಳ್ಳುವುದರ ಜೊತೆಗೆ ಮಷ್ಟಿಯಲ್ಲಿ ಪೊಲೀಸರು ಸಂಚಾರವನ್ನು ಸಹ ಹಮ್ಮಿಕೊಳ್ಳಲಾಗಿದೆ. ನಗರದ ರೈಲ್ವೆ ಸ್ಟೇಷನ್ ಸಿಸಿ.ಕ್ಯಾಮಾರಗಳಲ್ಲಿ ಅಪರಿಚಿತ ಚಲನವಲನಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ರೈಲ್ವೆ ನಿಲ್ದಾಣದ ನಾಲ್ಕು ದಿಕ್ಕುಗಳಲ್ಲೂ ಮಫಿಯಲ್ಲಿ ಪೊಲೀಸ್ ನಾಕಾಬಂದಿಯನ್ನು ಹಾಕಲಾಗಿದೆ. ಎಸ್ಪಿ ಕುಶಾಲ್ ಚೌಕ್ಷೆ ನೇತೃತ್ವದಲ್ಲಿ ವಿಶೇಷ ಪೊಲೀಸ್ ಪಹರೆಯನ್ನೇ ವಿವಿಧೆಡೆಗಳಲ್ಲಿ ನಿಯೋಜಿಸಲಾಗಿದೆ.

ಆತಂಕ ಬೇಡ:
ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವ ವಿಷಯ ತಿಳಿದ ಕೂಡಲೇ ನಗರದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ತಾಲೂಕಿನಲ್ಲೂ ಸಹ ಇದೇ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಯಾರೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿರುವ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಅಪರಿಚಿತ ವ್ಯಕ್ತಿಗಳು ಓಡಾಡುವುದು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುವುದು ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ನಿಮ್ಮ ವಾರ್ಡಿನ ಬೀಟ್ ಪೊಲೀಸ್ ಮೊಬೈಲ್ ನಂ.ಅಥವಾ ಪೊಲೀಸ್ ಠಾಣೆಯ ನಂಬರ್ಗೆಗೆ ಕೆರೆ ಮಾಡಿ, ಪ್ರತಿಯೊಬ್ಬರೂ ಮನೆಗಳ ಮುಂದೆ ಸಿಸಿ ಕ್ಯಾಮಾರಗಳನ್ನು ಅಳವಡಿಕೊಳ್ಳುವುದು ಸೂಕ್ತ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಚಡ್ಡಿಗ್ಯಾಂಗ್: ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುವ ದೃಶ್ಯಗಳು ಗಮನಿಸಿದರೆ ಈ ಮುಸುಕುಧಾರಿಗಳು ಆಂಧ್ರದ ಚಡ್ಡಿಗ್ಯಾಂಗ್ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಎಸ್ಪಿಯವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಪ್ರಾರಂಭಿಸಲಾಗಿದೆ. ನಗರ ಹಾಗೂ ತಾಲೂಕಿನಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ನಾಕಾಬಂದಿ ಹಾಗೂ ವಿಶೇಷ ಗಸ್ತು ಹಾಕಲಾಗಿದ್ದು, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಲಾಗಿದೆ. ರಾತ್ರಿ ವೇಳೆ ವಾಹನಗಳ ತಪಾಸಣೆ ಕೂಡ ನಡೆಸಲಾಗುತ್ತಿದೆ. ಪೊಲೀಸರೊಂದಿಗೆ ಸಾರ್ವಜನಿಕರು ಸೂಕ್ತ ಮಾಹಿತಿ ನೀಡುವ ಮೂಲಕ ಸಹಕರಿಸಿ ಎಂದು ಸಿಪಿಐ ಕೆ.ಪಿ.ಸತ್ಯನಾರಾಯಣ್ ಮನವಿ ಮಾಡಿದ್ದಾರೆ.

RELATED ARTICLES

Latest News