Tuesday, July 8, 2025
Homeರಾಜ್ಯಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದ ನಾಲ್ವರ ಬಂಧನ

ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದ ನಾಲ್ವರ ಬಂಧನ

Four arrested for brutally stripping and fatally assaulting a young man

ನೆಲಮಂಗಲ, ಜು.7– ಹುಡುಗಿ ವಿಚಾರಕ್ಕೆ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೇಮಂತ್‌, ಯಶವಂತ್‌, ಶಿವಶಂಕರ್‌,ಶಶಾಂಕ್‌ ಬಂಧಿತ ಆರೋಪಿಗಳು. ಕಾಲೇಜಿನ ದಿನಗಳಲ್ಲಿ ಕುಶಾಲ್‌ಗೆ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆದು ಕೆಲವು ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿ ಬೇರೊಬ್ಬನ ಜೊತೆ ಕಾಣಿಸಿಕೊಂಡಿದ್ದಳು. ಇದನ್ನು ಸಹಿಸಲಾಗದೆ ಕುಶಾಲ್‌‍, ಯುವತಿ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸಿದ್ದನು ಎಂದು ದೂರಲಾಗಿದೆ.

ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿಕೊಂಡು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಕುಶಾಲ್‌ನನ್ನು ನಂಬಿಸಿ ಬಾಗಲಗುಂಟೆಯ ಎಜಿಪಿ ಲೇಔಟ್‌ಗೆ ಕರೆಸಿಕೊಂಡಿದ್ದಾರೆ.

ಬಳಿಕ, ಕುಶಾಲ್‌ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕುಶಾಲ್‌ನ ಬಟ್ಟೆ ಬಿಚ್ಚಿ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ಜೊತೆ ಹಲ್ಲೆಯ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಆರೋಪಿಗಳು ಕುಶಾಲ್‌ಗೆ ಜೀವ ಬೆದರಿಕೆ ಹಾಕಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಹೆದರಿಸಿದ್ದಾರೆ.
ಈ ಬಗ್ಗೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News