Tuesday, July 8, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿ ಶಂಕಾಸ್ಪದ ದೋಣಿ ಪತ್ತೆ, ಕಟ್ಟೆಚ್ಚರ

ಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿ ಶಂಕಾಸ್ಪದ ದೋಣಿ ಪತ್ತೆ, ಕಟ್ಟೆಚ್ಚರ

Suspicious boat, likely from Pak, spotted off Maharashtra coast; state on alert

ಮುಂಬೈ,ಜು.7- ಮಹಾರಾಷ್ಟ್ರದ ರಾಯಗಢ ಕರಾವಳಿಯಲ್ಲಿಂದು ಅನುಮಾನಾಸ್ಪದವಾಗಿ ದೋಣಿಯೊಂದು ರೇವ್ಡಾಂಡ ಬಳಿ ಪತ್ತೆಯಾದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಎಚ್ಚರವಹಿಸುವಂತೆ ಭದ್ರತಾ ಪಡೆಗೆ ಸೂಚನೆ ನೀಡಲಾಗಿದೆ. ಈ ಅನುಮಾನಾಸ್ಪದ ದೋಣಿ ಪಾಕಿಸ್ತಾನದ್ದಾಗಿರಬಹುದು ಎಂದು ಶಂಕಿಸಲಾಗಿದೆ.

26/11ರಂದು ಮುಂಬೈ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ದೋಣಿ ಮೂಲಕ ಬಂದಿದ್ದರು. ಶಂಕಿತರನ್ನು ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.

ಕೊರ್ಲೈ ಸಮುದ್ರದಲ್ಲಿ ಶಂಕಾಸ್ಪದ ದೋಣಿಗಳಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರದಲ್ಲಿವೆ. ಶಂಕಿತರನ್ನು ಬಂಧಿಸಲು ಪೊಲೀಸರು ರಾತ್ರಿಯಿಡೀ ವಿವಿಧ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಅನುಮಾನಾಸ್ಪದ ದೋಣಿಯಿಂದ ಕೆಲವರು ಇಳಿದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಅವರ ಹುಡುಕಾಟಕ್ಕೆ ಕಾರ್ಯಾಚರಣೆ ಕೈಗೊಳ್ಳಲು ಅಣಿಯಾಗಿದ್ದಾರೆ. ರಾಯಗಢ ಪೊಲೀಸರು, ಕರಾವಳಿ ಕಾವಲು ಪಡೆ, ಕಸ್ಟಮ್ಸೌ ಇಲಾಖೆ, ಕ್ಷಿಪ್ರ ಪ್ರತಿಕ್ರಿಯೆ ತಂಡ, ಸ್ಥಳೀಯ ಅಪರಾಧ ಶಾಖೆ, ನೌಕಾಪಡೆ, ಬಾಂಬ್‌ ಪತ್ತೆ ಮತ್ತು ವಿಲೇವಾರಿ ದಳ ಸೇರಿದಂತೆ ಎಲ್ಲರೂ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಎಚ್ಚರವಹಿಸುವಂತೆ ಭದ್ರತಾ ಪಡೆಗೆ ಸೂಚನೆ ನೀಡಲಾಗಿದೆ.

ರಾಯಗಡ್‌ ಪೊಲೀಸರು, ತ್ವರಿತ ಪ್ರತಿಕ್ರಿಯೆ ತಂಡ , ಬಾಂಬ್‌ ಪತ್ತೆ ಮತ್ತು ವಿಲೇವಾರಿ ದಳ, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳ ಸಿಬ್ಬಂದಿ ರಾತ್ರಿ ವೇಳೆ ಸ್ಥಳಕ್ಕೆ ತಲುಪಿದ್ದಾರೆ.
ಆದಾಗ್ಯೂ, ರಾಯಗಢ ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ಅಂಚಲ್‌ ದಲಾಲ್‌ ಮತ್ತು ಇತರ ಹಿರಿಯ ಪೊಲೀಸ್‌‍ ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸಲು ಕರಾವಳಿಗೆ ತೆರಳಿದರು.

ಎಸ್‌‍ಪಿ ಬಾರ್ಜ್‌ ಬಳಸಿ ದೋಣಿ ತಲುಪಲು ಪ್ರಯತ್ನಿಸಿದರು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಹಿಂತಿರುಗಬೇಕಾಯಿತು.ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ದೋಣಿಯನ್ನು ಪತ್ತೆಹಚ್ಚುವ ಮತ್ತು ತಲುಪುವ ಪ್ರಯತ್ನಗಳು ತುಸು ವಿಳಂಬವಾಯಿತು.

ಅಧಿಕೃತ ಮಾಹಿತಿ ಇಲ್ಲ: ಶಂಕಾಸ್ಪದ ದೋಣಿ ಕೊರ್ಲೈ ಲೈಟ್‌ಹೌಸ್‌‍ನಿಂದ ಸುಮಾರು ಎರಡು ನಾಟಿಕಲ್‌ ಮೈಲಿಗಳಷ್ಟು ದೂರದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಜಿಲ್ಲಾಡಳಿತ ಯಾವುದೇ ಮಾಹಿತಿ ಮತ್ತು ಪ್ರತಿಕ್ರಿಯೆ ನೀಡಿಲ್ಲ.

ಕೊರ್ಲೈ ಗ್ರಾಮದ ಮಾಜಿ ಸರಪಂಚ ಪ್ರಶಾಂತ್‌ ಮಿಸಾಲ್‌ ಮಾತನಾಡಿ, ರಾತ್ರಿ 8:30 ರ ಸುಮಾರಿಗೆ ಪೊಲೀಸ್‌‍ ಅಧಿಕಾರಿಗಳಿಂದ ಕರೆ ಬಂದಿದ್ದು, ಪಾಕಿಸ್ತಾನಿ ದೋಣಿ ಸಮುದ್ರದಲ್ಲಿ ಕಂಡು ಬಂದಿರುವುದಾಗಿ ತಿಳಿಸಿದರು. ಕಡಲ ಕಿನಾರೆ ಬಳಿ ಗ್ರಾಮಸ್ಥರು ಹೋಗುವ ಮೊದಲೇ ಪೊಲೀಸರು ಅಲ್ಲಿಗೆ ತಲುಪಿದ್ದರು. ನಾವು ಬೆಳಗಿನ ಜಾವದವರೆಗೆ ಅಲ್ಲೇ ಇದ್ದೆವು. ಆದರೆ, ಬೆಳಗಿನ ಜಾವ 4 ಗಂಟೆಯ ನಂತರ ದೋಣಿ ಕಣರೆಯಾಯಿತು. ಆದ್ದರಿಂದ, ಇದು ಅನುಮಾನಾಸ್ಪದವಾಗಿ ಕಾಣುತ್ತಿದೆ. ಆದ್ದರಿಂದ, ಕೊರ್ಲೈ ಜನರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ತನಿಖೆ ಹಾಗೂ ಹುಡುಕಾಟದ ಬಳಿಕ ಘಟನೆ ಬಗ್ಗೆ ಅಧಿಕೃತವಾದ ಮಾಹಿತಿ ಗೊತ್ತಾಗಬೇಕಿದೆ. ಶಂಕಾಸ್ಪದ ಬೋಟ್‌ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

RELATED ARTICLES

Latest News