Tuesday, July 8, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಬೇಲೂರು : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ

ಬೇಲೂರು : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ

Belur: Huge tree falls on moving car

ಬೇಲೂರು,ಜು.8- ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಸಿಲ್ವರ್ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಅರೇಹಳ್ಳಿ ಸಮೀಪದ ದೋಲನಮನೆಯಲ್ಲಿ ನಡೆದಿದೆ.

ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ಈಶ್ವರ್ ಎಂಬುವವರು ಹೆಗ್ಗಡಿಹಳ್ಳಿಯಿಂದ ಅರೇಹಳ್ಳಿಗೆ ಕಾರಿನಲ್ಲಿ ಇತರರೊಂದಿಗೆ ದೋಲನಮನೆ ಗ್ರಾಮದ ಸಮೀಪ ತೆರಳುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಬೃಹತ್ ಗಾತ್ರದ ಸಿಲ್ವ‌ರ್ ಮರವೊಂದು ಕಾರಿನ ಮೇಲೆ ದಿಡೀರೆಂದು ಬಿದ್ದಿದೆ.

ಈ ಸಂದರ್ಭದಲ್ಲಿ ಚಾಲನೆ ಮಾಡುತಿದ್ದ ಚಾಲಕ ಈಶ್ವರ್‌ಗೆ ಸಣ್ಣ ಪುಟ್ಟ ಗಾಯಗಳಾದರೆ ಹಿಂದೆ ಕುಳಿತಿದ್ದ ಮೂವರಿಗೆ ಯಾವುದೇ ಗಾಯಗಳಾಗಿಲ್ಲ. ಮರಕಾರಿನ ಮೇಲೆ ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ವಾಹನಗಳ ದಟ್ಟಣೆ ಉಂಟಾಗಿತ್ತು. ನಂತರ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಕಾರಿನ ಮೇಲೆ ಬಿದ್ದ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

RELATED ARTICLES

Latest News