ಗೌರಿಬಿದನೂರು,ಜು.8- ಪಶ್ಚಿಮ ಬಂಗಾಳದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ತಾಲ್ಲೂಕಿನ ತೊಂಡೇಬಾವಿ ಗ್ರಾಮದ ಯೋಧ ಗಂಗಾಧರಪ್ಪ (54) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಕಳೆದ 30 ವರ್ಷಗಳಿಂದ ಐಟಿಬಿಪಿ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿದ್ದು, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ಗಡಿ ಪ್ರದೇಶದಲ್ಲಿ ಅವರು ಕಾರ್ಯ ನಿರ್ವಸಿದ್ದಾರೆ.
ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ತಾಲ್ಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ.
ಸೇನೆಯ ಸಿಬ್ಬಂದಿಯ ಶೇಷ ವಾಹನದಲ್ಲಿ ತೊಂಡೇಬಾಗೆ ಗಂಗಾಧರಪ್ಪ ಪಾರ್ಥಿವ ಶರೀರವನ್ನು ತಂದಾಗ ತಾಲೂಕು ಆಡಳಿತ ಸರ್ಕಾರಿ ಗೌರವಗಳಿಂದ ಬರಮಾಡಿಕೊಂಡು, ಗ್ರೇಡ್-ತಹಸೀಲ್ದಾರ್ ಆಶಾ ಗೌರವ ಸಲ್ಲಿಸಿದರು, ಕೆಲ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು, ನಂತರ ಸರಕಾರಿ ಗೌರವಗಳೊಂದಿಗೆ ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಮೃತ ಯೋಧನಿಗೆ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ, ಎಸ್ಸೆಗಳಾದ ಮೂರ್ತಿ, ಪ್ರಭಾಕರ್ ಮತ್ತು ಸಿಬ್ಬಂದ್ದಿಗಳು ಈ ಸಂದರ್ಭಲ್ಲಿ ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದರು.
ಸಂತಾಪ:
ಕ್ಷೇತ್ರದ ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡ, ಮಾಜಿ ಶಾಸಕರಾದ ಎನ್.ಎಚ್.ಶಿವಶಂಕರರೆಡ್ಡಿ, ಎನ್.ಜ್ಯೋತಿರೆಡ್ಡಿ, ಬಿಜೆಪಿ ಮುಖಂಡ ಎನ್.ಎಂ.ರನಾರಾಯಣರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಮುಖಂಡ ಸಿ.ಆರ್.ನರಸಿಂಹಮೂರ್ತಿ ಮುಂತಾದವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.
- ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಡಿಸಿಎಂ ಚರ್ಚೆ
- ಇಡಿ ಯಿಂದ ಡಿ.ಕೆ.ಸುರೇಶ್ ವಿಚಾರಣೆ
- ಇಂದು ಅಮರನಾಥನ ದರ್ಶನಕ್ಕೆ ಹೊರಟ 7500 ಭಕ್ತರು
- ಗಾಂಜಾ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
- ಬಿಹಾರ ಮಹಿಳೆಯರಿಗೆ ಮಾತ್ರ ಉದ್ಯೋಗ ಮೀಸಲಾತಿ : ನಿತೀಶ್ ಕುಮಾರ್ ಘೋಷಣೆ