ಬೆಂಗಳೂರು,ಜು.8- ಆಂಧ್ರಪ್ರದೇಶದಲ್ಲಿ ಕೈಗಾರಿಕೆಗಳಿಗೆ ಪ್ರತಿ ಎಕರೆಗೆ 99 ಪೈಸೆಯಂತೆ 10 ಸಾವಿರ ಎಕರೆಗಳನ್ನು ನೀಡಲಾಗುತ್ತಿದೆ. ಇಂತಹ ಪೈಪೋಟಿ ಇರುವಾಗ ನಮಲ್ಲಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವುದು ಕೈಗಾರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಸರಿಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್‌ರಾಜ್ ಬಹುಭಾಷಾ ನಟರು. ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಅಭಿನಯಿಸಿದ್ದಾರೆ. ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವರಿಗೆ ಹಕ್ಕಿದೆ. ಆಂಧ್ರಪ್ರದೇಶದಲ್ಲಿ 45 ಸಾವಿರ ಎಕರೆ ಭೂಸ್ವಾಧೀನವಾಗುತ್ತಿದೆ. ಅದರ ವಿರುದ್ಧ ಹೋರಾಟ ಮಾಡಲಿ ಎಂದು ತಿಳಿಸಿದರು.
ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ಶೇ.65 ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದೇವೆ. ಎಚ್‌ಎಎಲ್, ಸಾಫ್ರಾ, ಏರ್‌ಬಸ್, ಬೋಯಿಂಗ್, ಲಾಕೆಟ್‌ಮಾರ್ಟಿನ್, ಕಾಲಿನ್‌್ಸ ಸೇರಿದಂತೆ ಹಲವಾರು ಸಂಸ್ಥೆಗಳು ನಮಲ್ಲಿವೆ. ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು 10 ಸಾವಿರ ಎಕರೆಯಷ್ಟು ಉಚಿತ ಭೂಮಿ ನೀಡುತ್ತಿದ್ದಾರೆ. ಟಿಸಿಎಸ್ ಇನ್ಫೋಸಿಸ್‌ನಂತಹ ಕಂಪನಿಗಳಿಗೆ ಎಕರೆಗೆ 89 ಪೈಸೆಯಂತೆ ಭೂಮಿ ನೀಡುತ್ತಿದ್ದಾರೆ. ಅದರ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ ಎಂದರು.
ಎಚ್‌ಎಎಲ್ ಸಂಸ್ಥೆ ಆಂಧ್ರಪ್ರದೇಶಕ್ಕೆ ಬರಬೇಕು ಎಂದು ಒತ್ತಡ ಹೇರಲಾಗಿತ್ತು. ನಾನು ಎಚ್‌ಎಎಲ್‌ನ ಅಧ್ಯಕ್ಷರನ್ನು ಭೇಟಿ ಮಾಡಿ ಹೆಚ್ಚುವರಿ ಭೂಮಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಬದ್ಧವಾಗಿದ್ದೇನೆ ಎಂದು ಭರವಸೆ ನೀಡಿದ್ದೇನೆ. ಅದರಿಂದ ಅವರು ಸಮಾಧಾನವಾಗಿದ್ದಾರೆ. ನಾವು ಪೈಪೋಟಿಯ ಪ್ರಪಂಚದಲ್ಲಿದ್ದೇವೆ ಎಂದು ಹೇಳಿದರು.
ಏರೋಸ್ಪೇಸ್‌ಗಾಗಿ ದೇವನಹಳ್ಳಿ ಬಳಿ ಭೂಸ್ವಾಧೀನವಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ನಮಗೆ ಪೈಪೋಟಿ ನೀಡುತ್ತಿವೆ. ಹೀಗಾಗಿ ನಾವು ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಬೇಕು. ಪ್ರಕಾಶ್‌ರಾಜ್‌ರವರ ಪ್ರಭಾವ ತೆಲುಗು ನಾಡಿನಲ್ಲಿ ಹೆಚ್ಚಿದೆ. ಅಲ್ಲಿನ ಭೂಸ್ವಾಧೀನಗಳ ವಿರುದ್ಧ ಹೋರಾಟ ನಡೆಸಲಿ. ಇದರ ಹೊರತಾಗಿ ತಮಗೆ ಪ್ರಕಾಶ್‌ರಾಜ್ ವಿರುದ್ಧ ವೈಯಕ್ತಿಕವಾದ ಯಾವುದೇ ದ್ವೇಷವಿಲ್ಲ ಎಂದರು.
ರೈತರಿಗೆ 2013ರ ಭೂಸ್ವಾದಿಧಿನ ಕಾಯ್ದೆಯಡಿಯಲ್ಲಿ ರೈತರಿಗೆ ಪರಿಹಾರ ನೀಡುತ್ತಿದ್ದೇವೆ. ಕೈಗಾರಿಕಾ ಸಚಿವನಾಗಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದೇನೆ. ಹಿಂದೆ ನೀರಾವರಿ ಸಚಿವನಾಗಿದ್ದಾಗ ಆ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ತಿಳಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ವರಿಷ್ಠರು ಬಂದಾಗ ಆ ಪಕ್ಷದ ಶಾಸಕರು ಭೇಟಿಯಾಗುವುದಿಲ್ಲವೇ? ಕಾಂಗ್ರೆಸ್‌ನ ಶಾಸಕರ ಭೇಟಿಗೆ ಮಾತ್ರ ಟೀಕೆಗಳು ಏಕೆ? ಎಂದು ಪ್ರಶ್ನಿಸಿದರು.
ಬಸವರಾಜರಾಯರೆಡ್ಡಿ ಮುಖ್ಯಮಂತ್ರಿಯವರ ಆಪ್ತರು, ಹಣಕಾಸಿನ ಸಲಹೆಗಾರರು, ಮಾಧ್ಯಮಗಳನ್ನು ದಾರಿ ತಪ್ಪಿಸಲು ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿಕೆ ನೀಡಿರಬಹುದು, ಅವರು ಹೇಳಿರುವುದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದರು.ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಯೊಂದು ಕ್ಷೇತ್ರಕ್ಕೂ ತಲಾ 50 ಕೋಟಿ ರೂ.ಗಳನ್ನು ನೀಡುತ್ತಿದ್ದಾರೆ. ಹೀಗಾಗಿ ರಸ್ತೆ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇದೆ ಎಂಬುದು ಸರಿಯಲ್ಲ ಎಂದರು.
ನಾಯಕರ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ. ಈ ಮಧ್ಯೆ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬುದು ಅಪ್ರಸ್ತುತ ಎಂದು ಹೇಳಿದರು.ಉಚಿತ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ರಂಭಾಪುರಿ ಶ್ರೀಗಳು ನಮವರೇ. ಆದರೆ ಬಡತನದ ಬಗ್ಗೆ ಅರಿವಿಲ್ಲ. ಬಡತನ ಎಲ್ಲಾ ಕಡೆ ಇದೆ. ಉಚಿತ ಯೋಜನೆಗಳಿಂದ ಜನ ಸೋಮಾರಿಗಳಾಗಿದ್ದಾರೆ ಎನ್ನುವುದು ಸರಿಯಲ್ಲ ಎಂದರು.
- ಎಲ್ಪಿಜಿ ಟ್ಯಾಂಕ್ ಸ್ಫೋಟಗೊಂಡು 7 ಮಂದಿ ಸಜೀವ ದಹನ
- ಬೈಕ್ಗೆ ಕಾರು ಡಿಕ್ಕಿಯಾಗಿ ಸೇತುವೆಯಿಂದ ಬಿದ್ದು ಮಹಿಳೆ ಸಾವು
- ವಾಯು ರಕ್ಷಣಾ ಶಸ್ತ್ರಾಸ್ತ್ರ ಹಾರಾಟ ಪರೀಕ್ಷೆ ಯಶಸ್ವಿ
- ಮನೆಯಲ್ಲೇ ಎಸ್ಐಟಿಯಿಂದ ಸುಜಾತ ಭಟ್ ವಿಚಾರಣೆ
- ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ