Thursday, July 10, 2025
Homeರಾಷ್ಟ್ರೀಯ | Nationalಮೋದಿಜಿಗೆ ಬ್ರೆಜಿಲ್‌ನ ಅತ್ಯುನ್ನತ ಪ್ರಶಸ್ತಿ ದಕ್ಕಿರುವುದು ದೇಶಕ್ಕೆ ಹೆಮ್ಮೆ : ಯೋಗಿ

ಮೋದಿಜಿಗೆ ಬ್ರೆಜಿಲ್‌ನ ಅತ್ಯುನ್ನತ ಪ್ರಶಸ್ತಿ ದಕ್ಕಿರುವುದು ದೇಶಕ್ಕೆ ಹೆಮ್ಮೆ : ಯೋಗಿ

UP CM Adityanath hails Brazil's highest civilian award for PM Modi

ಲಕ್ಕೋ, ಜು. 9 (ಪಿಟಿಐ) ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ದಿ ಗ್ರಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದಿಸಿದ್ದಾರೆ ಮಾತ್ರವಲ್ಲ, ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆದಿತ್ಯನಾಥ್ ಅವರು, ಬ್ರೆಜಿಲ್‌ನ ಅತ್ಯುನ್ನತ ರಾಷ್ಟ್ರೀಯ ಗೌರವ ದಿ ಗ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ ಪಡೆದ ಗೌರವಾನ್ವಿತ ಪ್ರಧಾನಿ ಮೋದಿಜಿ ಅವರಿಗೆ ಅಭಿನಂದನೆಗಳು.ಈ ಪ್ರತಿಷ್ಠಿತ ಮನ್ನಣೆಯು ನಿಮ್ಮ ದೂರದೃಷ್ಟಿಯ ನಾಯಕತ್ವ ಮತ್ತು ನಂಬಿಕೆ, ಸಹಕಾರ ಮತ್ತು ಹಂಚಿಕೆಯ ಜಾಗತಿಕ ಗುರಿಗಳ ಮೂಲಕ ಭಾರತ-ಬ್ರೆಜಿಲ್ ಸಂಬಂಧಗಳನ್ನು ಬಲಪಡಿಸುವಲ್ಲಿ ಸಮರ್ಪಿತ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಈ ಗೌರವವನ್ನು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಇದು ಭಾರತದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನವನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ- ಬ್ರೆಜಿಲ್ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ಮೋದಿ ನೀಡಿದ ಕೊಡುಗೆಗಳನ್ನು ಗುರುತಿಸಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಈ ಗೌರವವನ್ನು ಪ್ರದಾನ ಮಾಡಿದರು.ಮೇ 2014 ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ಸರ್ಕಾರವು ಅವರಿಗೆ ನೀಡಿದ 26 ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ.

RELATED ARTICLES

Latest News