ಪನ್ನಾ, ಜು. 9 (ಪಿಟಿಐ) ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಕಾರ್ಮಿಕನೊಬ್ಬನಿಗೆ ಅಂದಾಜು 40 ಲಕ್ಷ ರೂ. ಮೌಲ್ಯದ ವಜ್ರ ಸಿಕ್ಕಿದೆ. ಕಾರ್ಮಿಕ ಮಾಧವ್ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಆಳವಿಲ್ಲದ ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಇತ್ತೀಚೆಗೆ 11.95 ಕ್ಯಾರೆಟ್ ಅಮೂಲ್ಯ ವಜ್ರವನ್ನು ಹೊರತೆಗೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಜ್ರವು ತುಂಬಾ ಸ್ವಚ್ಛ ಮತ್ತು ಅಮೂಲ್ಯವಾಗಿದೆ. ಇದರ ಮೌಲ್ಯ 40 ಲಕ್ಷ ರೂ.ಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ ಎಂದು ಪನ್ನಾ ವಜ್ರ ಕಚೇರಿಯ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ.
ನಿಯಮಗಳ ಪ್ರಕಾರ ಕಾರ್ಮಿಕನು ಪನ್ನಾದಲ್ಲಿರುವ ವಜ್ರ ಕಚೇರಿಯಲ್ಲಿ ಅಮೂಲ್ಯ ಕಲ್ಲನ್ನು ರೇವಣಿ ಇಟ್ಟಿದ್ದಾನೆ.ವಜ್ರವನ್ನು ಶೀಘ್ರದಲ್ಲೇ ಹರಾಜು ಮಾಡಲಾಗುವುದು ಮತ್ತು ಶೇ.12.5 ರಷ್ಟು ರಾಯಧನವನ್ನು ಕಡಿತಗೊಳಿಸಿದ ನಂತರ ಆದಾಯವನ್ನು ಕಾರ್ಮಿಕರಿಗೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿರುವ ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್‌ಗಳ ವಜ್ರದ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ.
- ಎಲ್ಪಿಜಿ ಟ್ಯಾಂಕ್ ಸ್ಫೋಟಗೊಂಡು 7 ಮಂದಿ ಸಜೀವ ದಹನ
- ಬೈಕ್ಗೆ ಕಾರು ಡಿಕ್ಕಿಯಾಗಿ ಸೇತುವೆಯಿಂದ ಬಿದ್ದು ಮಹಿಳೆ ಸಾವು
- ವಾಯು ರಕ್ಷಣಾ ಶಸ್ತ್ರಾಸ್ತ್ರ ಹಾರಾಟ ಪರೀಕ್ಷೆ ಯಶಸ್ವಿ
- ಮನೆಯಲ್ಲೇ ಎಸ್ಐಟಿಯಿಂದ ಸುಜಾತ ಭಟ್ ವಿಚಾರಣೆ
- ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ