Wednesday, July 9, 2025
Homeರಾಜ್ಯಚಾಮುಂಡೇಶ್ವರಿ ಭಕ್ತರಿಗೆ ಮೈಸೂರು ಪಾಕ್ ವಿತರಣೆ

ಚಾಮುಂಡೇಶ್ವರಿ ಭಕ್ತರಿಗೆ ಮೈಸೂರು ಪಾಕ್ ವಿತರಣೆ

Mysore Pak distributed to Chamundeshwari devotees

ಮೈಸೂರು, ಜು. 9- ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಅಪೂರ್ವ ಸ್ನೇಹ ಬಳಗದ ವತಿಯಿಂದ ಮೈಸೂರು ಪಾಕ್ ವಿತರಿಸಲಾಯಿತು.ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಣೆ ಕಾರ್ಯಕ್ಕೆ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದಿಕ್ಷಿತ್ ಅವರು ಚಾಲನೆ ನೀಡಿದರು.

ಪಾರಂಪರಿಕ ಖಾದ್ಯವಾದ ಮೈಸೂರು ಪಾಕ್ ವೈಜ್ಞಾನಿಕವಾಗಿಯೂ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಕಡಲೆಹಿಟ್ಟು ಚರ್ಮದ ಆರೋಗ್ಯ ಕಾಪಾಡುತ್ತದೆ, ನೈಸರ್ಗಿಕ ತುಪ್ಪ ಮನುಷ್ಯನ ಮೂಳೆಗಳಿಗೆ ಶಕ್ತಿ ನೀಡುತ್ತದೆ.

ಮೈಸೂರು ಪಾಕ್ ದೇಶ-ವಿದೇಶಗಳಲ್ಲಿ ಜನಪ್ರಿಯ ಸಿಹಿಯಾಗಿದ್ದು, ಮೈಸೂರಿಗರು ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಹಬ್ಬಗಳಲ್ಲಿ ಹೆಚ್ಚಾಗಿ ಮೈಸೂರು ಪಾಕ್ ಬಳಸಲು ಇಚ್ಛಿಸುತ್ತಾರೆ ಎಂದು ಶಶಿಶೇಖ‌ರ್ ದೀಕ್ಷಿತ್ ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಸೋಮಣ್ಣ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಜಿ ರಾಘವೇಂದ್ರ, ಸವಿತಾ ಘಾಟೈ, ಜಯಶ್ರೀ ಶಿವರಾಮ್ ಮತ್ತಿತರರು ಹಾಜರಿದ್ದರು.

RELATED ARTICLES

Latest News