Thursday, July 10, 2025
Homeಬೆಂಗಳೂರುಬೆಂಗಳೂರು : ಲುಂಗಿಯುಟ್ಟು ಮಂಕಿಕ್ಯಾಪ್‌ ಧರಿಸಿ ಎಟಿಎಂ ದರೋಡೆಗೆ ಯತ್ನ

ಬೆಂಗಳೂರು : ಲುಂಗಿಯುಟ್ಟು ಮಂಕಿಕ್ಯಾಪ್‌ ಧರಿಸಿ ಎಟಿಎಂ ದರೋಡೆಗೆ ಯತ್ನ

Bengaluru: Attempt to rob ATM wearing lungi and monkey cap

ಬೆಂಗಳೂರು,ಜು.9- ಬೆಳ್ಳಂಬೆಳಗ್ಗೆ ಲುಂಗಿ ಉಟ್ಕೊಂಡು ಮಂಕಿಕ್ಯಾಪ್‌ ಧರಿಸಿ ಬಂದ ದರೋಡೆಕೋರ ಎಟಿಎಂ ನಲ್ಲಿ ಹಣ ದೋಚಲು ಯತ್ನಿಸಿರುವ ಘಟನೆ ಹುಳಿಮಾವು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಬಸವನಪುರದಲ್ಲಿರುವ ಎಚ್‌ಡಿಎಫ್‌ಸಿ ಶಾಖೆಯ ಎಟಿಎಂ ಕೇಂದ್ರಕ್ಕೆ ಬಂದ ದರೋಡೆಕೋರ ತನ್ನ ಚಹರೆ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗದಂತೆ ಮಂಕಿಕ್ಯಾಪ್‌ ಧರಿಸಿದ್ದ.ಎಟಿಎಂನಲ್ಲಿ ತಲೆ ಬಗ್ಗಿಸಿಕೊಂಡೇ ಹಾರೆಯಿಂದ ಎಟಿಎಂ ಯಂತ್ರ ಮೀಟುತ್ತಿದ್ದಂತೆ ಸೈರನ್‌ ಆಗಿದೆ. ಸೈರನ್‌ ಸದ್ದು ಕೇಳಿದೊಡನೆ ದರೋಡೆಕೋರ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಎಟಿಎಂ ಕಳುವಿಗೆ ಯತ್ನ ನಡೆಸುತ್ತಿರುವ ಬಗ್ಗೆ ಹೆಚ್‌ಡಿಎಫ್‌ಸಿ ಹೆಡ್‌ಆಫೀಸ್‌‍ಗೆ ಅಲರಾಂ ತಲುಪುತ್ತಿದ್ದಂತೆ ಬ್ಯಾಂಕ್‌ ಅಧಿಕಾರಿಗಳು ಹುಳಿಮಾವು ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಅಲರ್ಟ್‌ ಆದ ಪೊಲೀಸರು, ಎಎಸ್‌‍ಐ ಸುರೇಶ್‌ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಅಷ್ಟರಲ್ಲಾಗಲೇ ದರೋಡೆಕೋರ ನಾಪತ್ತೆಯಾಗಿದ್ದನು. ಪೊಲೀಸರು ಎಟಿಎಂ ಒಳಗಿದ್ದ ಸಿಸಿ ಕ್ಯಾಮೇರಾ ಹಾಗೂ ಎಟಿಎಂ ಕೇಂದ್ರದ ಸುತ್ತಮುತ್ತ ರಸ್ತೆಯಲ್ಲಿರುವ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸುತ್ತಿದ್ದು, ದರೋಡೆಕೋರನ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News