Thursday, July 10, 2025
Homeರಾಷ್ಟ್ರೀಯ | Nationalವಾಯು ಪಡೆ ವಿಮಾನ ಪತನ, ಇಬ್ಬರು ಪೈಲೆಟ್‌ ಸಾವು

ವಾಯು ಪಡೆ ವಿಮಾನ ಪತನ, ಇಬ್ಬರು ಪೈಲೆಟ್‌ ಸಾವು

Indian Air Force fighter jet crashes in Rajasthan's Churu

ಜೈಪುರ,ಜು.9-ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವೊಂದು ರಾಜಸ್ಥಾನದ ಚಿರುಜಿಲ್ಲೆಯಲ್ಲಿ ಪತನಗೊಂದು ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿದ್ದಾರೆ. ಭಾನುಡ ಗ್ರಾಮದ ಕೃಷಿ ಜಮೀನಿನಲ್ಲಿ ವಿಮಾನ ಪತನಗೊಂಡು ಒತ್ತಿಉರಿದಿದೆ.

ಇಂದು ಬೆಳಗ್ಗೆ ಹಾರಾಟದ ವೇಳೆ ತಾಂತ್ರಿಕ ದೋಷ ಉಂಟಾಗಿ ಯುದ್ಧ ವಿಮಾನ ಪತನಗೊಂಡಿದೆ ಎಂದು ರಕ್ಷಣ ಮೂಲಗಳು ತಿಳಿಸಿವೆ.ಸ್ಥಳಕ್ಕೆ ರಕ್ಷಣಾ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಗ್ರಾಮಸ್ಥರು ತಂಡೋಪತಂಡವಾಗಿ ಅಲ್ಲಿ ಜಮಾಯಿಸಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದ್ದು, ಮೃತ ಪೈಲಟ್‌ನ ಬಗ್ಗ ವಿವಿರ ಕಲೆ ಹಾಕಲಾಗುತ್ತಿದೆ.

RELATED ARTICLES

Latest News