Saturday, July 12, 2025
Homeಅಂತಾರಾಷ್ಟ್ರೀಯ | Internationalಪಾಕಿಸ್ತಾನದ ಬಲೂಚಿಸ್ತಾನದಲ್ಲಿ 9 ಪ್ರಯಾಣಿಕರ ಹತ್ಯೆ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 9 ಪ್ರಯಾಣಿಕರ ಹತ್ಯೆ

9 Bus Passengers Kidnapped, Shot Dead In Balochistan

ಬಲೂಚಿಸ್ತಾನ,ಜು.11-ಪಾಕಿಸ್ತಾನದ ಹಿಂಸಾಪೀಡಿತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಸ್‌‍ನಿಂದ ಪ್ರಯಾಣಿಕರ ಇಳಿಸಿದ ನಂತರ ದಂಗೆಕೋರರು 9 ಜನರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಪಂಜಾಬ್‌ ಪ್ರಾಂತ್ಯದ ಝೋಬ್‌ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಸಹಾಯಕ ಆಯುಕ್ತ ಝೋಬ್‌ ನವೀದ್‌ ಆಲಂ ಹೇಳಿದ್ದಾರೆ.

ಶಸ್ತ್ರಸಜ್ಜಿತ ದಂಗೆಕೋರರು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಅವರಲ್ಲಿ ಒಂಬತ್ತು ಜನರನ್ನು ಕ್ವೆಟ್ಟಾದಿಂದ ಲಾಹೋರ್‌ಗೆ ಹೋಗುತ್ತಿದ್ದವರನ್ನು ಗುರಿಯಾಗಿಸಿ ಅವರನ್ನು ಗುಂಡಿಕ್ಕಿ ಕೊಂದ್ದಾರೆ.ಎಲ್ಲಾ ಒಂಬತ್ತು ಮಂದಿ ಪಂಜಾಬ್‌ ಪ್ರಾಂತ್ಯದ ವಿವಿಧ ಭಾಗಗಳಿಗೆ ಸೇರಿದವರು ಎಂದು ಆಲಂ ಹೇಳಿದರು.

ದಂಗೆಕೋರರು ಪಂಜಾಬ್‌ ಪ್ರಾಂತ್ಯಕ್ಕೆ ಸೇರಿದ ಜನರು ಮತ್ತು ಬಲೂಚಿಸ್ತಾನದ ವಿವಿಧ ಹೆದ್ದಾರಿಗಳಲ್ಲಿ ಚಲಿಸುವ ಪ್ರಯಾಣಿಕ ಬಸ್‌‍ಗಳನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಹಿಂದೆ, ಜನಾಂಗೀಯ ಬಲೂಚ್‌ ಭಯೋತ್ಪಾದಕ ಗುಂಪುಗಳು ಪಂಜಾಬ್‌ ಜನರ ವಿರುದ್ಧ ಇಂತಹ ದಾಳಿಗಳನ್ನು ನಡೆಸಿದ್ದವು.

ಏತನ್ಮಧ್ಯೆ, ಕ್ವೆಟ್ಟಾ, ಲೊರಾಲೈ ಮತ್ತು ಮಸ್ತಂಗ್‌ನಲ್ಲಿ ದಂಗೆಕೋರರು ದಾಳಿಗಳನ್ನು ನಡೆಸಿದ್ದಾರೆ, ಆದರೆ ಬಲೂಚಿಸ್ತಾನ್‌ ಸರ್ಕಾರದ ವಕ್ತಾರ ಶಾಹಿದ್‌ ರಿಂಡ್‌ ಭದ್ರತಾ ಪಡೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಹೇಳಿದ್ದಾರೆ.

ಬಲೂಚಿಸ್ತಾನ್‌ ಮಾಧ್ಯಮಗಳಲ್ಲಿನ ದೃಢೀಕರಿಸದ ವರದಿಗಳ ಪ್ರಕಾರ, ದಂಗೆಕೋರರು ರಾತ್ರಿಯ ಸಮಯದಲ್ಲಿ ಪ್ರಾಂತ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಮತ್ತು ಚೆಕ್‌ ಪೋಸ್ಟ್‌ಗಳು, ಸರ್ಕಾರಿ ಕಚೇರಿಗಳು ,ಪೊಲೀಸ್‌‍ ಠಾಣೆಗಳು, ಬ್ಯಾಂಕುಗಳು ಮತ್ತು ಸಂವಹನ ಗೋಪುರಗಳ ಮೇಲೆ ದಾಳಿ ಮಾಡುವ ಮೂಲಕ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ತೀವ್ರಗೊಳಿಸಿದ್ದಾರೆ.

RELATED ARTICLES

Latest News