Saturday, July 12, 2025
Homeಇದೀಗ ಬಂದ ಸುದ್ದಿಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿ ಬಡವಾದ ಕಾರ್ಯಕರ್ತರು

ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿ ಬಡವಾದ ಕಾರ್ಯಕರ್ತರು

Chief Minister Chair Fight Between CM-DCM

ಬೆಂಗಳೂರು,ಜು.11- ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಕಾಂಗ್ರೆಸ್‌‍ ಸರ್ಕಾರ ಆಡಳಿತದಲ್ಲಿದ್ದರೂ ನಿಗದಿತ ಅವಧಿಗೆ ನೇಮಕಾತಿಯಾಗದೆ ಕಾರ್ಯಕರ್ತರು ಹಾಗೂ ಮುಖಂಡರು ಅಧಿಕಾರ ವಂಚಿತರಾಗುತ್ತಿರುವ ಅಸಮಾಧಾನಗಳು ಕೇಳಿಬಂದಿವೆ.

ವಿಧಾನಪರಿಷತ್‌ನಲ್ಲಿ 4 ಸ್ಥಾನಗಳ ಸದಸ್ಯರು ನಿವೃತ್ತರಾಗಿದ್ದು, ಆ ಸ್ಥಾನಕ್ಕೆ ನಾಲ್ಕು ಮಂದಿಯ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಬೆಂಬಲಿಗರ ನಡುವಿನ ಹಗ್ಗಜಗ್ಗಾಟದಲ್ಲಿ ನೇಮಕಾತಿಯೇ ಪೂರ್ಣಗೊಳ್ಳದೆ ಬಾಕಿ ಉಳಿದಿದೆ.

ಸುಮಾರು ನೂರಕ್ಕೂ ಹೆಚ್ಚು ನಿಗಮಮಂಡಳಿಗಳ ಪೈಕಿ 70ಕ್ಕೆ ಮಾತ್ರ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿಯಾಗಿದೆ. ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿಲ್ಲ. ಈವರೆಗೂ ಯಾವ ನಿಗಮ ಮಂಡಳಿಗಳಿಗೂ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

2013 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಇದೇ ರೀತಿಯ ವಿಳಂಬ ಧೋರಣೆ ಮಾಡಿ ಮೂರು ವರ್ಷ ಕಾಲಹರಣ ಮಾಡಿದ್ದರು. ಕೊನೆಯ ಎರಡು ವರ್ಷ ಮಾತ್ರ ಕಾರ್ಯಕರ್ತರಿಗೆ ಅವಕಾಶ ನೀಡಿದ್ದರು. ಅದರ ಪರಿಣಾಮ 2018 ರ ವಿಧಾನಸಭೆಯ ಚುನಾವಣೆಯ ಮೇಲಾಗಿದ್ದು, ಕಾಂಗ್ರೆಸ್‌‍ ಸೋತು ಅಧಿಕಾರ ಕಳೆದುಕೊಂಡಿತ್ತು.

2023 ರಲ್ಲಿ ಕಾಂಗ್ರೆಸ್‌‍ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ, ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸಲು ಸಾಧ್ಯವಾಗಿಲ್ಲ. ಕೆಲವರಿಗಷ್ಟೇ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ ಬಹುತೇಕರು ಶಾಸಕರೇ ಇದ್ದಾರೆ. ಚುನಾವಣೆ ವೇಳೆ ಕಷ್ಟಪಟ್ಟು ದುಡಿದ ಕಾರ್ಯಕರ್ತರು ಅವಕಾಶ ವಂಚಿತರಾಗಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.

ಡಿ.ಕೆ.ಶಿವಕುಮಾರ್‌ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಬೇಕು ಎಂದು ಪದೇಪದೇ ಒತ್ತಾಯಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಶಾಸಕರನ್ನು ಸಮಾಧಾನಪಡಿಸಲು ನಿಗಮ-ಮಂಡಳಿಗಳಿಗೆ ಶಾಸಕರನ್ನೇ ನೇಮಿಸುವ ಮೂಲಕ ಸಿದ್ದರಾಮಯ್ಯ ಬೇರೆ ರೀತಿಯ ರಣತಂತ್ರಗಾರಿಕೆ ರೂಪಿಸಿದ್ದರು. ಅದು ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಹೆಚ್ಚಿಸಿತ್ತು. ಈಗಲೂ ಆ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಕೆಎಂಎಫ್‌ನ ಅಧ್ಯಕ್ಷ ಸ್ಥಾನದ ವಿಷಯದಲ್ಲೂ ಜಟಾಪಟಿ ಶುರುವಾಗಿದೆ. ಡಿ.ಕೆ.ಶಿವಕುಮಾರ್‌ ತಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕೆಎಂಎಫ್‌ ಅಧ್ಯಕ್ಷಸ್ಥಾನದಲ್ಲಿ ಕೂರಿಸುವ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ, ಕೆಎಂಎಫ್‌ನ ಹಾಲಿ ಅಧ್ಯಕ್ಷ ಭೀಮಾನಾಯಕ್‌ ಮತ್ತಿತರರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಈ ವಿಚಾರವಾಗಿ ಸಿದ್ದರಾಮಯ್ಯ ಮತ್ತೊಮೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇತ್ತ ಪಕ್ಷ ಸಂಘಟನೆಯಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶ ಕೊಡದೆ ಡಿ.ಕೆ.ಶಿವಕುಮಾರ್‌ ತಮಗೆ ಬೇಕಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿಕೊಳ್ಳುವ ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಈಗಾಗಲೇ ವೀಕ್ಷಕರ ತಂಡವನ್ನು ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗಿದೆ.

RELATED ARTICLES

Latest News