ರಾಯಚೂರು,ಜು.12- ಮಹಿಳೆಯೊಬ್ಬಳು ಪತಿಯನ್ನೇ ನದಿಗೆ ತಳ್ಳಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ಪತಿಯನ್ನು ಪುಸಲಾಯಿಸಿಕೊಂಡು ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಕರೆದುಕೊಂಡು ಬಂದ ಮಹಿಳೆ ಫೋಟೊಶೂಟ್ ಮಾಡಿದ್ದಾರೆ. ಬ್ರಿಡ್ಜ್ ಮೇಲೆ ನಿಂತು ಮೊದಲು ತಾನು ಫೋಟೊ ತೆಗೆಸಿಕೊಂಡಿದ್ದ ಪತ್ನಿ ನಂತರ ಪತಿಯನ್ನು ಬ್ರಿಡ್ಜ್ ತುದಿಗೆ ಹೋಗಿ ನಿಲ್ಲಲು ಹೇಳಿದ್ದಾರೆ. ಇದೇ ವೇಳೆ ಬ್ರಿಡ್ಜ್ ನ ತುದಿಯಲ್ಲಿದ್ದ ಪತಿಯನ್ನು ಕೆಳಕ್ಕೆ ತಳ್ಳಿದ್ದಾರೆ.
ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಆ ವ್ಯಕ್ತಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದಾರೆ. ಈಜು ಚೆನ್ನಾಗಿ ಬರುತ್ತಿದ್ದುದ್ದರಿಂದ ಈಜಿಕೊಂಡು ಹೋಗಿ ನದಿಭಾಗದ ಬಂಡೆಯೊಂದರ ಮೇಲೆ ಕುಳಿತು ಬಚಾವಾಗಿದ್ದಾರೆ.ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ಜನ ಸ್ಥಳಕ್ಕೆ ಆಗಮಿಸಿ ಹಗ್ಗದ ಮೂಲಕ ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ.
ನಂತರ ಆತ ಪತ್ನಿಯೇ ನನ್ನನ್ನು ಕೆಳಕ್ಕೆ ತಳ್ಳಿದಳು ಎಂದು ಆರೋಪಿಸಿದ್ದಾರೆ. ಆದರೆ ಗಂಡನೇ ಕಾಲುಜಾರಿಬಿದ್ದ ಎಂದು ಮಹಿಳೆ ಹೇಳಿದ್ದಾರೆ. ಅಲ್ಲಿದ್ದ ಕೆಲ ಪ್ರತ್ಯಕ್ಷದರ್ಶಿಗಳು ಪತ್ನಿಯೇ ಆತನನ್ನು ನದಿಗೆ ತಳ್ಳಿದ್ದಾಗಿ ಹೇಳಿದರು.ಪೊಲೀಸರಿಗೆ ಮಾಹಿತಿ ತಲುಪುವ ಭಯದಲ್ಲಿ ಮಹಿಳೆ ತರಾತುರಿಯಲ್ಲಿ ಪತಿಯನ್ನು ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
- ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್
- ಮೊಬೈಲ್ ಕಳೆದುಹೋದರೆ-ಕಳ್ಳತನವಾದರೆ ದೂರು ನೀಡಿ, ಇಲ್ಲದಿದ್ರೆ ಸಂಕಷ್ಟ ಗ್ಯಾರಂಟಿ
- ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸಾರಥ್ಯ
- ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ : ಆರ್.ಅಶೋಕ್ ಆಕ್ರೋಶ
- ನಾಳೆ ಆಂಧ್ರಕ್ಕೆ ಮೋದಿ : 13,430 ಕೋಟಿ ರೂ.ಗಳ ಯೋಜನೆಗೆ ಚಾಲನೆ