Saturday, July 12, 2025
Homeರಾಷ್ಟ್ರೀಯ | National1.25 ಲಕ್ಷ ಕೋಟಿ ರೂ. ಮೀರಿದ ಭಾರತದ ರಕ್ಷಣಾ ಉತ್ಪಾದನೆ : ಪ್ರಧಾನಿ ಮೋದಿ

1.25 ಲಕ್ಷ ಕೋಟಿ ರೂ. ಮೀರಿದ ಭಾರತದ ರಕ್ಷಣಾ ಉತ್ಪಾದನೆ : ಪ್ರಧಾನಿ ಮೋದಿ

India Setting New Records In Defence Manufacturing; Production Exceeds Rs 1.25 Lakh Crore: PM Modi

ನವದೆಹಲಿ,ಜು.12- ಭಾರತದ ರಕ್ಷಣಾ ಉತ್ಪಾದನೆಯು 1.25 ಲಕ್ಷ ಕೋಟಿ ರೂ. ಮೀರಿದ್ದು, ಇಂದು ನಾವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ, 16ನೇ ರೋಜ್‌ಗಾರ್‌ ಮೇಳದಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಭಾರತದಲ್ಲಿ ಎರಡರಿಂದ ನಾಲ್ಕು ಮೊಬೈಲ್‌ ಉತ್ಪಾದನಾ ಘಟಕಗಳು ಮಾತ್ರ ಇದ್ದವು. ಈಗ ಮೊಬೈಲ್‌ ಫೋನ್‌ ತಯಾರಿಕೆಗೆ ಸಂಬಂಧಿಸಿದ 300 ಘಟಕಗಳಿವೆ. ಲಕ್ಷಾಂತರ ಯುವಜನರಿಗೆ ಉದ್ಯೋಗ ನೀಡಿದ್ದೇವೆ ಎಂದರು.

ಅದೇ ರೀತಿ ಆಪರೇಷನ್‌ ಸಿಂಧೂರ್‌ ನಂತರ ವ್ಯಾಪಕವಾಗಿ ಹೆಮೆಯಿಂದ ಚರ್ಚಿಸಲಾದ ಮತ್ತೊಂದು ವಲಯವೆಂದರೆ ಅದು ರಕ್ಷಣಾ ವಲಯ. ರಕ್ಷಣಾ ಉತ್ಪಾದನೆಯಲ್ಲೂ ಭಾರತ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ನಮ ರಕ್ಷಣಾ ಉತ್ಪಾದನೆಯು 1.25 ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಯುವಕರು ದೇಶದ ಅತಿದೊಡ್ಡ ಆಸ್ತಿ ಮತ್ತು ಉಜ್ವಲ ಭವಿಷ್ಯದ ಬಲವಾದ ಭರವಸೆಯಿದೆ. ಇಂದು ಭಾರತವು ಎರಡು ಅಪರಿಮಿತ ಶಕ್ತಿಗಳನ್ನು ಹೊಂದಿದೆ ಎಂದು ಜಗತ್ತು ಒಪ್ಪಿಕೊಂಡಿದೆ. ಮೊದಲನೆಯದಾಗಿ, ಜನಸಂಖ್ಯಾಶಾಸ್ತ್ರ ಮತ್ತು ಎರಡನೆಯದಾಗಿ, ಪ್ರಜಾಪ್ರಭುತ್ವ. ಈ ಯುವಶಕ್ತಿಯು ಭಾರತದ ಉಜ್ವಲ ಭವಿಷ್ಯದ ದೊಡ್ಡ ಆಸ್ತಿ ಮತ್ತು ದೊಡ್ಡ ಖಾತರಿಯಾಗಿದೆ ಎಂದು ಬಣ್ಣಿಸಿದರು.

ನಮ ಸರ್ಕಾರವು ಈ ಆಸ್ತಿಯನ್ನು ಸಮೃದ್ಧಿಯ ಸೂತ್ರವನ್ನಾಗಿ ಮಾಡುವಲ್ಲಿ ಅವಿಶ್ರಾಂತವಾಗಿ ತೊಡಗಿಸಿಕೊಂಡಿದೆ. ನಾನು ಐದು ದೇಶಗಳ ಭೇಟಿಯಿಂದ ಹಿಂದಿರುಗಿದೆ. ಪ್ರತಿ ದೇಶದಲ್ಲೂ ಭಾರತದ ಯುವ ಶಕ್ತಿಯ ಪ್ರತಿಧ್ವನಿ ಕೇಳಿಬಂತು. ಈ ಸಮಯದಲ್ಲಿ, ಮಾಡಿಕೊಂಡ ಎಲ್ಲಾ ಒಪ್ಪಂದಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯುವಕರಿಗೆ ಖಂಡಿತವಾಗಿಯೂ ಪ್ರಯೋಜನ ನೀಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ತಮ ಸರ್ಕಾರ ಗಮನಹರಿಸಿದೆ. ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ ಎಂಬ ಹೊಸ ಯೋಜನೆಯನ್ನು ಅನುಮೋದಿಸಲಾಗಿದೆ. ಈ ಯೋಜನೆಯಡಿ ಖಾಸಗಿ ವಲಯದಲ್ಲಿ ತಮ ಮೊದಲ ಉದ್ಯೋಗವನ್ನು ಪಡೆಯುವ ಯುವಕರಿಗೆ ಸರ್ಕಾರ 15,000 ರೂ.ಗಳನ್ನು ನೀಡುತ್ತದೆ ಎಂದರು.

ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಗಾಗಿ ಕೇಂದ್ರ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಿದೆ. ಇದು ಸುಮಾರು 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.ಇದೇ ವೇಳೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000ಕ್ಕೂ ಹೆಚ್ಚು ಯುವಕರಿಗೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ನೇಮಕಾತಿ ಪತ್ರಗಳನ್ನು ಪ್ರಧಾನಿ ವಿತರಿಸಿದರು.

RELATED ARTICLES

Latest News