Sunday, July 13, 2025
Homeಬೆಂಗಳೂರುಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ : ಸೀಮಂತ್‌ಕುಮಾರ್‌ ಸಿಂಗ್‌

ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ : ಸೀಮಂತ್‌ಕುಮಾರ್‌ ಸಿಂಗ್‌

Public cooperation is essential for the police to perform their duties well

ಬೆಂಗಳೂರು,ಜು.12– ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿದರೆ ಇನ್ನೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬಹುದೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮನವಿ ಮಾಡಿದರು. ವೈಟ್‌ಫೀಲ್ಡ್ ನ ಇಪಿಐಪಿ ಪ್ರದೇಶದ ಕ್ವಾಲ್ಲ್ಕಮ್‌ ನಲ್ಲಿಂದು ಹಮಿಕೊಂಡಿದ್ದ ಮಾಸಿಕ ಜನ ಸಂಪರ್ಕ ಸಭೆ ಹಾಗೂ ಸಂಚಾರ ಸಂಪರ್ಕ ದಿವಸ್‌‍ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.

ವೈಟ್‌ಫೀಲ್‌್ಡ ವಿಭಾಗಕ್ಕೆ ಗ್ರಾಮಾಂತರ ಪ್ರದೇಶಗಳೇ ಹೆಚ್ಚು ಇರುವ ಆವಲಹಳ್ಳಿ ಪೊಲೀಸ್‌‍ ಠಾಣೆಗೆ ಸೇರಿಕೊಂಡಿದೆ. ನಗರ ವ್ಯಾಪ್ತಿಯಲ್ಲಾದರೆ ಮೂರರಿಂದ ನಾಲ್ಕು ಕಿಲೋಮೀಟರ್‌ ಅಂತರದಲ್ಲಿ ಠಾಣೆಗಳಿರುತ್ತವೆ. ಆದರೆ ಇದು ಗ್ರಾಮಾಂತರವಾದ್ದರಿಂದ ಎಂಟರಿಂದ ಹತ್ತು ಕಿಲೋಮೀಟರ್‌ ದೂರವಿರುವುದರಿಂದ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.

ಈ ಠಾಣೆಗೆ ಸದ್ಯದಲ್ಲೇ ಹೊಯ್ಸಳ ವಾಹನ, ಹೆಚ್ಚು ಸಿಬ್ಬಂದಿಯನ್ನು ನೀಡಲಾಗುತ್ತದೆ. ಸಾರ್ವಜನಿಕರು ತಮ ಸುತ್ತಮುತ್ತ ಏನಾದರೂ ಘಟನೆಗಳಾದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಿದರೆ, ತಕ್ಷಣ ನಮ ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ. ಹಾಗಾಗಿ ಸಾರ್ವಜನಿಕ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ಸಂಪರ್ಕ ಸಭೆಯಲ್ಲಿ ಹಲವು ಸಾರ್ವಜನಿಕರು ಸಂಚಾರ ದಟ್ಟಣೆ, ಸಿಸಿ ಕ್ಯಾಮೇರಾ ಅಳವಡಿಕೆ, ಹೆಚ್ಚಿನ ಪೊಲೀಸ್‌‍ ಗಸ್ತು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ಇದೇ ವೇಳೆ ಸಂಚಾರ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತರಾದ ಅನುಚೇತ್‌ ಅವರು ಸಂಚಾರದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಲೋನ್‌ ಆ್ಯಪ್‌ ಬಗ್ಗೆ ಎಚ್ಚರ:ಲೋನ್‌ಆ್ಯಪ್‌ಗಳ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದಿರಬೇಕು. ಇಂತಹ ಆ್ಯಪ್‌ಗಳನ್ನು ವಿನಾಕಾರಣ ಡೌನ್‌ಲೋಡ್‌ ಮಾಡಿಕೊಳ್ಳಬಾರದು ಎಂದು ಇನ್‌್ಸಪೆಕ್ಟರ್‌ರೊಬ್ಬರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಒಂದು ವೇಳೆ ಅಂತಹ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಂಚನೆಗೊಳಗಾದರೆ ಲಕ್ಷಾಂತರ ಹಣ ಕಳೆದುಕೊಳ್ಳುತ್ತೀರಿ.

ಈಗಾಗಲೇ ಲೋನ್‌ಆ್ಯಪ್‌ಗಳಿಂದ ಹಲವಾರು ಮಂದಿ 50 ರಿಂದ 60 ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಆ್ಯಪ್‌ ಬಗ್ಗೆ ಜಾಗೃತರಾಗಿರಿ ಎಂದರು. ಲೋನ್‌ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಲ್ಲಿ ಆ ವಾಟ್‌್ಸಪ್‌ ಬಂದ್‌ ಮಾಡಿ ಬೇರೆ ನಂಬರ್‌ ಬಳಸಿರಿ. ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ನಿಮಗೆ ಗೊತ್ತಿಲ್ಲದಂತೆ ನಿಮನ್ನು ಸೇರಿಸಿಕೊಳ್ಳುತ್ತಾರೆ.

ಅಂತಹ ಗ್ರೂಪ್‌ಗಳಿಂದ ಹೊರ ಬರದಿದ್ದರೆ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡು ತೊಂದರೆ ಕೊಡುತ್ತಾರೆ, ಇದರಿಂದ ಸಂಕಷ್ಟಕ್ಕೆ ಒಳಗಾಗುತ್ತೀರಿ ಹಾಗಾಗಿ ಗ್ರೂಪ್‌ನಿಂದ ಹೊರಬಂದು ಎಚ್ಚರಿಕೆಯಿಂದಿರಿ ಎಂದು ಅವರು ಸಲಹೆ ಮಾಡಿದರು. ನಿಮ ಬ್ಯಾಂಕ್‌ ಖಾತೆಗಳ ನಂಬರ್‌ನ್ನು ಬೇರೆಯವರಿಗೆ ಕಳುಹಿಸಬೇಡಿ ,ಕಮಿಷನ್‌ ಆಸೆಗೆ ಅಕೌಂಟ್‌ ನಂಬರ್‌ ಕೊಟ್ಟರೆ ನಿಮ ಖಾತೆಯಲ್ಲರುವ ಹಣ ಗುಳುಂ ಆಗುವ ಸಾಧ್ಯತೆ ಇರುತ್ತದೆ ಎಂದು ಇನ್‌ಸ್ಪೆಕ್ಟರ್‌ ಅರಿವು ಮೂಡಿಸಿದರು.

RELATED ARTICLES

Latest News