Sunday, July 13, 2025
Homeರಾಷ್ಟ್ರೀಯ | Nationalಮಂಗಳೂರು ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ : ಇಬ್ಬರು ಸಿಬ್ಬಂದಿ ಸಾವು

ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆ : ಇಬ್ಬರು ಸಿಬ್ಬಂದಿ ಸಾವು

Two Workers Die at MRPL Mangaluru Plant: Probe Ordered into Fatal Incident

ಬೆಂಗಳೂರು,ಜು.12-ತೈಲ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಸೂರತ್ಕಲ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ.ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್‌ ಪ್ರಸಾದ ಸಾವನ್ನಪ್ಪಿದ ಸಿಬ್ಬಂದಿ.

ಸೂರತ್ಕಲ್‌ನ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕದ ಆಯಿಲ್‌ಮೂವ್‌ಮೆಂಟ್‌ ವಿಭಾಗದಲ್ಲಿ ಇಂದು ಬೆಳಗ್ಗೆ 8.30 ರ ಸುಮಾರಿನಲ್ಲಿ ದೋಷ ಕಂಡು ಬಂದಿದೆ.ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಶೀಲನೆಗಾಗಿ ತೈಲ ಶುದ್ಧೀಕರಣದ ಟ್ಯಾಂಕ್‌ ಮೇಲ್ಛಾ ವಣಿಗೆ ಹೋಗಿದ್ದಾರೆ. ಆ ವೇಳೆ ಅನಿಲ ಸೋರಿಕೆಯಾಗುತ್ತಿದ್ದು ದರಿಂದ ಇಬ್ಬರು ಸಿಬ್ಬಂದಿ ತಲೆ ಸುತ್ತಿನಿಂದ ಕುಸಿದು ಅಸ್ವಸ್ಥಗೊಂಡಿ ದ್ದಾರೆ.

ತಕ್ಷಣ ಜೊತೆಯಲ್ಲಿದ್ದ ಸಹದ್ಯೋಗಿಗಳು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ.ಈ ಇಬ್ಬರ ರಕ್ಷಣೆಗೆ ನೆರವಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ತನಿಖೆ:ಈ ಘಟನೆಯಿಂದ ಆತಂಕಗೊಂಡಿರುವ ಎಂಆರ್‌ಪಿಎಲ್‌ ಆಡಳಿತ ಮಂಡಳಿಯು ಗ್ರೂಪ್‌ ಜನರಲ್‌ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಯು ಎಂಆರ್‌ಪಿಎಲ್‌ ಘಟಕದಲ್ಲಿ ಅನಿಲ ಸೋರಿಕೆಯಾಗಲು ಕಾರಣವೇನು,ಎಷ್ಟು ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದೆ.

RELATED ARTICLES

Latest News