ಹುಬ್ಬಳ್ಳಿ,ಜು.13- ಒಂದೇ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ನಡೆದಿದೆ. ರವಿರಾಜ್ ಜಾಡರ್(42) ಮತ್ತು ಬಸವನಗೌಡ ಪಾಟೀಲ್(56) ಮೃತ ದುರ್ದೈವಿಗಳು. ಕಳೆದ 24 ಗಂಟೆಗಳಲ್ಲಿ ಇಬ್ಬರು ರೈತರು ನೇಣಿಗೆ ಶರಣಾಗಿದ್ದು ಭಾರಿ ಆತಂಕ ಮೂಡಿಸಿದೆ.
ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಹೊಡೆತಕ್ಕೆ ಕಂಗಾಲಾಗಿದ್ದ ರೈತರು,ಕೃಷಿಗಾಗಿ ಬ್ಯಾಂಕ್ ಮತ್ತು ಖಾಸಗಿಯಾಗಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ರೈತರ ಆತಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
- ಪೊಲೀಸ್ ಕಸ್ಟಡಿ ಸಾವು ವಿರೋಧಿಸಿ ಬೀದಿಗಿಳಿದ ವಿಜಯ್
- ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ
- ಬೆಳಗಾವಿ : ನಡು ರಸ್ತೆಯಲ್ಲೇ ಯುವ ಗಾಯಕನ ಬರ್ಬರ ಹತ್ಯೆ
- ಕಿರು ತೆರೆ ನಟಿ ಶ್ರುತಿ ಮೇಲಿನ ಹಲ್ಲೆಗೆ ನೈಜ ಕಾರಣ ಬಿಚ್ಚಿಟ್ಟ ಪತಿ
- ಬಿಹಾರ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ..!