ಭೂಪಾಲ್,ಜು.16- ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವಿಷಪೂರಿತ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ.ದೀಪಕ್ ಮಹಾವರ್ ಮೃತಪಟ್ಟ ವ್ಯಕ್ತಿ. ಅತಿಯಾದ ಹುಚ್ಚಾಟ ಪ್ರಾಣಕ್ಕೆ ಕುತ್ತು ತರಬಹುದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಘಟನೆ ನಡೆಯುವ ಮೊದಲು ಪಕ್ಕದಲ್ಲಿದ್ದ ವ್ಯಕ್ತಿ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಓಡಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ದೀಪಕ್, ಹಾವುಗಳನ್ನು ರಕ್ಷಿಸುವಲ್ಲಿ ಹೆಸರುವಾಸಿಯಾಗಿದ್ದರು. ಸಾವಿರಾರು ಹಾವುಗಳನ್ನು ರಕ್ಷಿಸಿದ್ದರು. ಮುಂಬರುವ ಶ್ರಾವಣ ಮಾಸದ ಮೆರವಣಿಗೆಯಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಅವರು ಇತ್ತೀಚೆಗೆ ಒಂದು ನಾಗರಹಾವನ್ನು ಹಿಡಿದು ಗಾಜಿನ ಪಾತ್ರೆಯಲ್ಲಿ ಇಟ್ಟಿದ್ದರು.
ಘಟನೆ ನಡೆದ ದಿನ, ದೀಪಕ್ ತನ್ನ ಮಕ್ಕಳನ್ನು ಶಾಲೆಗೆ ಬಿಡುವಾಗ ಹಾರದಂತೆ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡಿದ್ದ. ನಂತರ, ನಾಗರಹಾವು ಇದ್ದಕ್ಕಿದ್ದಂತೆ ಆತನನ್ನು ಕಚ್ಚಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾರೆ.
ದೀಪಕ್‌ಗೆ ವಿಷ ನಿರೋಧಕ ನೀಡಲಾಯಿತಾದರೂ ವೈದ್ಯಕೀಯ ಸಹಾಯ ಪಡೆಯುವಲ್ಲಿ ವಿಳಂಬವಾದ ಕಾರಣ ಅದು ನಿಷ್ಟಪ್ರಯೋಜಕವಾಗಿದೆ.ಈ ಘಟನೆಯಿಂದಾಗಿ ದೀಪಕ್ ಅವರ ಇಬ್ಬರು ಗಂಡು ಮಕ್ಕಳಾದ ರೌನಕ್ ಮತ್ತು ಚಿರಾಗ್ ಈಗ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಪತ್ನಿ ಮೊದಲೇ ನಿಧನರಾಗಿದ್ದರು.
- ರೌಡಿ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ
- ವೈಭವದಿಂದ ಜರುಗಿದ ಚಾಮುಂಡೇಶ್ವರಿ ವರ್ಧಂತಿ ಉತ್ಸವ
- ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ
- ಛತ್ತೀಸ್ಗಡ : ಹೈಟೆಕ್ ಸಾಧನಗಳನ್ನು ಬಳಸಿ ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಕಲು