ಬೆಂಗಳೂರು,ಜು.17– ಚುನಾವಣೆ ಬಂದಾಗ ಬಿಜೆಪಿಯವರು ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದರು.ಕಳೆದ 25 ವರ್ಷದಿಂದ ಬಿಹಾರದಲ್ಲಿ ಬಿಜೆಪಿಯ ಸಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ದೇಶದಲ್ಲಿ ಅತ್ಯಂತ ಭ್ರಷ್ಟ ರಾಜ್ಯ ಬಿಹಾರವಾಗಿದೆ ಎಂದು ಟೀಕಿಸಿದರು.
ಜಿಎಸ್‌ಟಿ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣವಿದ್ದು, ಶಿಕ್ಷಣ, ಕೈಗಾರಿಕೆಯಲ್ಲೂ ಹಿಂದುಳಿದಿದೆ. ದಕ್ಷಿಣ ರಾಜ್ಯಗಳಿಗೆ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ ಪಾಲಿನ ಜಿಎಸ್‌ಟಿ ಹಣವು ಅಲ್ಲಿಗೆ ಹೋಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಇಷ್ಟೆಲ್ಲಾ ಹಣ ಹೋದರೂ 15 ಸೇತುವೆಗಳು ಕುಸಿದುಬಿದ್ದಿವೆ. ಇದುವರೆಗೂ ಬಿಹಾರ ರಾಜ್ಯ ಯಾವುದೇ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಆಧಾರ್‌ಕಾರ್ಡ್ ಅನ್ನು ವಿರೋಧಿಸಿತ್ತು. ನರೇಗ ಹಾಗೂ 5 ಗ್ಯಾರಂಟಿಗಳ ವಿರುದ್ಧ ಮಾತನಾಡುತ್ತಿದ್ದರು. ಈಗ ಅವರೇ ಘೋಷಣೆ ಮಾಡಿದ್ದಾರೆ ಎಂದು ಬಿಹಾರದಲ್ಲಿ ಉಚಿತ ವಿದ್ಯುತ್ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿಯವರು ನಮ ಗ್ಯಾರಂಟಿಗಳನ್ನು ಅವಹೇಳನ ಮಾಡುತ್ತಿದ್ದರು. ಈಗ ಅವರೇ ಘೋಷಣೆ ಮಾಡಿದ್ದಾರೆ. ಜನಪರ ಕಾರ್ಯಕ್ರಮವಾಗಿರುವುದರಿಂದ ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಸ್ವಾಗತಿಸುತ್ತೇವೆ ಎಂದರು.
ಬಿಹಾರದಲ್ಲಿ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ. ದೇಶದಲ್ಲಿ ನಮ ರಾಜ್ಯ ಎರಡನೇ ಸ್ಥಾನದಲ್ಲಿರಲು ಗ್ಯಾರಂಟಿ ಯೋಜನೆಗಳೇ ಕಾರಣ. ವಾರ್ಷಿಕ 56 ಸಾವಿರ ಕೋಟಿ ರೂ. ಗ್ಯಾರಂಟಿಗಾಗಿ ಖರ್ಚಾಗುತ್ತದೆ. ಇದರಿಂದ ಜಿಎಸ್‌ಟಿ ಸಂಗ್ರಹವು ಆಗುತ್ತದೆ. ರಾಜ್ಯದ ಆದಾಯದ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಸಮರ್ಥಿಸಿಕೊಂಡರು.
- ಕೇವಲ 4 ನಿಮಿಷದಲ್ಲಿ ನೆಪೋಲಿಯನ್ ಕಿರೀಟದ ಆಭರಣಗಳನ್ನು ಕದ್ದ ಕಳ್ಳನ ಕೈಚಳಕಕ್ಕೆ ಫಿದಾ ಆದ ಸಚಿವೆ..!
- ಓಲಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ : ಕಂಪನಿ ಸಿಇಓ, ಹಿರಿಯ ಅಧಿಕಾರಿ ವಿರುದ್ಧ ಎಫ್ಐಆರ್
- ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ
- ಆರ್ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್ ವಾಗ್ದಾಳಿ
- ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಭೀಕರ ಅಫಘಾತ : ಇಬ್ಬರ ಸಾವು