ಬೆಂಗಳೂರು, ಜು.17- ನಗರದ ಎಲ್ಲಾ ನಿವೇಶನದಾರರಿಗೂ ಇ ಖಾತೆ ಹಂಚಿಕೆ ಮಾಡುವ ಭರವಸೆ ನೀಡಿದ್ದ ಸರ್ಕಾರದ ಯೋಜನೆ ಕುಂಟುತ್ತಾ ಸಾಗತೊಡಗಿದೆ.ಯೋಜನೆ ಸಾಕಾರಕ್ಕೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಹೀಗಾಗಿ ಪ್ರತಿನಿತ್ಯ ಬೆರಳೆಣಿಕಯ ಖಾತಾ ಹಂಚಿಕೆಯಾಗುತ್ತಿದೆ.
ಒಂದು ದಿನಕ್ಕೆ ಒಂದು ವಾರ್ಡ್‌ನಲ್ಲಿ ಕೇವಲ 8 ಇ ಖಾತ ಮಾತ್ರ ಹಂಚಿಕೆ ಮಾಡಲಾಗುತ್ತಿದೆ. ಒಟ್ಟು 225 ವಾರ್ಡ್ ನಲ್ಲಿ 1,800 ಇ ಖಾತೆ ಮಾತ್ರ ವಿತರಿಸಲಾಗುತ್ತಿದೆ.ಕಳೆದ ಹತ್ತು ತಿಂಗಳಿನಿಂದ ಬಿಬಿಎಂಪಿ ಹಂಚಿರೋದು 5 ಲಕ್ಷದ 84 ಸಾವಿರ ಇ ಖಾತ ಮಾತ್ರ.. ಒಟ್ಟು 20 ಲಕ್ಷದ 57 ಸಾವಿರ ಸ್ವತ್ತುಗಳು ಪಾಲಿಕೆಯ ಅಧಿಕೃತ ಪಟ್ಟಿಯಲ್ಲಿದೆ..ಈ ಪೈಕಿ ಇನ್ನೂ 15 ಲಕ್ಷಕ್ಕೂ ಅಧಿಕ ಸ್ವತ್ತುಗಳಿಗೆ ಇ ಖಾತ ನೀಡಲು ಬಾಕಿ ಇರುವುದನ್ನು ನೋಡಿದರೆ ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುವಂತಾಗಿದೆ.
ಖಾತೆಗೆ ಜನ ಅರ್ಜಿ ಹಾಕಿದರೂ ಇ ಖಾತ ನೀಡದೆ ಬಿಬಿಎಂಪಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.ಈ ಧೋರಣೆಯಿಂದ ಸ್ವತ್ತಿನ ಖಾತೆದಾರರಲ್ಲಿ ಆತಂಕ ಮನೆ ಮಾಡುವಂತಾಗಿದೆ.ಸರಿಯಾದ ಸಮಯಕ್ಕೆ ಇ ಖಾತ ಸಿಗದೆ ತಮ ಆಸ್ತಿಯನ್ನು ಮಾರಾಟ ಮಾಡಲು ಇಲ್ಲವೆ ವರ್ಗಾವಣೆ ಮಾಡಲು ಸಾಧ್ಯವಾಗದೆ ಜನ ಪರಿತಪಿಸುವಂತಾಗಿದೆ.
- ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ
- ಮೈಸೂರಿಗೆ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಾಳೆ ಅರಮನೆ-ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
- ತನಿಖೆಯಾಗದೆ ಸಿಬಿಐನಲ್ಲಿ ಬಾಕಿ ಉಳಿದ 74 ಗಂಭೀರ ಪ್ರಕರಣಗಳು, ಮರೀಚಿಕೆಯಾದ ನ್ಯಾಯ
- ಹಣೆಗೆ ತಿಲಕ ಧರಿಸಿ ತರಗತಿಗೆ ಬರದಂತೆ ಪ್ರಾಶುಂಪಾಲ ಸುತ್ತೋಲೆ : ಪೋಷಕರಿಂದ ಪ್ರತಿಭಟನೆ
- ಕಾಳೇಶ್ವರಂ ಯೋಜನೆ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿದ ರೇವಂತ್ ರೆಡ್ಡಿ