Friday, July 18, 2025
Homeರಾಷ್ಟ್ರೀಯ | Nationalವಿಪ್ರೋ ತ್ರೈಮಾಸಿಕ ಫಲಿತಾಂಶ ಪ್ರಕಟಣೆ : ನಿವ್ವಳ ಲಾಭ ಶೇ.10.9ರಷ್ಟು ಪ್ರಗತಿ

ವಿಪ್ರೋ ತ್ರೈಮಾಸಿಕ ಫಲಿತಾಂಶ ಪ್ರಕಟಣೆ : ನಿವ್ವಳ ಲಾಭ ಶೇ.10.9ರಷ್ಟು ಪ್ರಗತಿ

Wipro announces Q1 FY26 results, revenue and profit increase

ಬೆಂಗಳೂರು, ಜು.18- ಮುಂಚೂಣಿಯ ಎಐ-ಸನ್ನದ್ಧ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್‌ ಕಂಪನಿ ವಿಪೊ ಲಿಮಿಟೆಡ್‌ ಜೂನ್‌ 30ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆ ಮಾನದಂಡಗಳು (ಐ.ಎಫ್‌.ಆರ್‌.ಎಸ್‌‍.) ಅನ್ವಯ ಪ್ರಕಟಿಸಿದೆ.

ಈ ತ್ರೈಮಾಸಿಕದ ನಿವ್ವಳ ಲಾಭ 3,330 ಕೋಟಿ (388.4 ಮಿಲಿಯನ್‌1) ಇದ್ದು ವರ್ಷದಿಂದ ವರ್ಷಕ್ಕೆ 10.9% ಹೆಚ್ಚಳ ಕಂಡಿದೆ, ನಿವ್ವಳ ಆದಾಯ 22,130 ಕೋಟಿ (2,581.61) ಇದ್ದು ವರ್ಷದಿಂದ ವರ್ಷಕ್ಕೆ 0.8% ಹೆಚ್ಚಳ ಕಂಡಿದೆ, ಒಟ್ಟು ಬುಕಿಂಗ್‌ ಗಳು3 4,971ಮಿಲಿಯನ್‌ ಇದ್ದು ವರ್ಷದಿಂದ ವರ್ಷಕ್ಕೆ 50.7% ಸತತ ಕರೆನ್ಸಿ2 ಹೆಚ್ಚಳ ಕಂಡಿದೆ.

ದೊಡ್ಡ ಡೀಲ್‌ ಬುಕಿಂಗ್‌ ಗಳು4 2,666 ಮಿಲಿಯನ್‌ ಇದ್ದು ವರ್ಷದಿಂದ ವರ್ಷಕ್ಕೆ 130.8%ರಷ್ಟು ಸತತ ಕರೆನ್ಸಿ2 ಹೆಚ್ಚಳ ಕಂಡಿದೆ. ಕ್ಯೂ1 26ರ ಐಟಿ ಸೇವೆಗಳ ಆಪರೇಟಿಂಗ್‌ ಮಾರ್ಜಿನ್‌ ಶೇ.17.3 ಇದ್ದು ವರ್ಷದಿಂದ ವರ್ಷಕ್ಕೆ ಶೇ.0.8 ವಿಸ್ತರಣೆ, ಪ್ರತಿ ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್‌ 5 ಪ್ರಕಟಿಸಲಾಗಿದೆ.

ವಿಪೊ ಇಂದು ಪ್ರಕಟಿಸಿದಂತೆ ಜೂನ್‌ 30, 2025ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು ರೂ.22,130 ಕೋಟಿ ನಿವ್ವಳ ಆದಾಯ ಗಳಿಸಿದೆ ಮತ್ತು ರೂ.3,330 ಕೋಟಿ ಲಾಭ ಗಳಿಸಿದೆ. ಈ ತ್ರೈಮಾಸಿಕ ಐಟಿ ಸೇವೆಗಳ ಆಪರೇಟಿಂಗ್‌ ಮಾರ್ಜಿನ್‌ 17.3% ಇದ್ದು ವರ್ಷದಿಂದ ವರ್ಷಕ್ಕೆ 0.8% ವಿಸ್ತರಿಸಲಾಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 2,666 ದೊಡ್ಡ ಡೀಲ್‌ ಗಳನ್ನು ಬುಕ್‌ ಮಾಡಿದ್ದು ಇದು ವರ್ಷದಿಂದ ವರ್ಷಕ್ಕೆ 131% ಹೆಚ್ಚಳ ಕಂಡಿದೆ.

ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಯಾ, ಆರ್ಥಿಕ ಅನಿಶ್ಚಿತತೆಯ ತ್ರೈಮಾಸಿಕದಲ್ಲೂ ಗ್ರಾಹಕರು ದಕ್ಷತೆ ಮತ್ತು ವೆಚ್ಚದ ಆಪ್ಟಿಮೈಸೇಷನ್‌ಗೆ ಆದ್ಯತೆ ನೀಡಿದ್ದಾರೆ. ಹಿಂದಿನ ತ್ರೈಮಾಸಿಕದ ವೇಗದ ಮೇಲೆ ನಿರ್ಮಿಸಿದ ಮತ್ತು ಅದಕ್ಕೆ ಬೆಂಬಲವಾಗಿ ಮತ್ತಷ್ಟು ಸರತಿಯಲ್ಲಿದ್ದು ದ್ವಿತೀಯಾರ್ಧಕ್ಕೆ ನಾವು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES

Latest News