ಲಖ್ನೋ,ಜು.18– ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ನೊಂದ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳು ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಗಟನೆ ಉತ್ತರಪ್ರದೇಶದ ರಾತೋಡ್ ಗ್ರಾಮದ ಭಾಗ್ಪತ್‌ನಲ್ಲಿ ನಡೆದಿದೆ. ಮನೀಷಾ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಮಹಿಳೆ.
ಆತಹತ್ಯೆಗೂ ಮುನ್ನ 3 ನಿಮಿಷ 29 ಸೆಕೆಂಡುಗಳ ಭಾವನಾತಕ ವೀಡಿಯೊವನ್ನು ರೆಕಾರ್ಡ್ ಮಾಡಿ ಎರಡು ಡೆತನೋಟ್ ಬರೆದಿಟ್ಟಿದ್ದಾರೆ. ವೀಡಿಯೊದಲ್ಲಿ ತಮ ಪತಿ ಮತ್ತು ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದು, ದೈಹಿಕ ಕಿರುಕುಳಕ್ಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬುಲೆಟ್ ಬೈಕ್ ಮತ್ತು ಪೀಠೋಪಕರಣಗಳಂತಹ ಉಡುಗೊರೆಗಳನ್ನು ನೀಡಿ ತನ್ನ ತಂದೆ 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಮದುವೆ ಮಾಡಿದ್ದರು. ಆದಾಗ್ಯೂ ಅತ್ತೆ-ಮಾವ ಕಾರು ಬೇಕೆಂದು ಒತ್ತಾಯಿಸುತ್ತಿದ್ದರು. ಇದನ್ನು ವಿರೋಧಿಸಿದ್ದಕ್ಕೆ ತನಗೆ ವಿದ್ಯುತ್ ಶಾಕ್ ನೀಡಲು ಯತ್ನಿಸಿದ್ದರು ಮಹಿಳೆ ತಿಳಿಸಿದ್ದಾರೆ.
ಮತ್ತೊಂದು ದುರಂತವೆಂದರೆ ಮನೀಷಾ ಗರ್ಭಿಣಿಯಾಗಿದ್ದು, ಅತ್ತೆ-ಮಾವಂದಿರು ತಮನ್ನು ಗರ್ಭಿಣಿಯಾಗುವಂತೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ. ಈ ದೌರ್ಜನ್ಯದಿಂದಾಗಿ ಮನೀಷಾ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಾನಸಿಕ ಆಘಾತಕ್ಕೊಳಗಾಗಿದ್ದ ಮನೀಷಾ ಅಂತಿಮವಾಗಿ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
- ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ : ಅಶೋಕ್ ವಾಗ್ದಾಳಿ
- ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ
- ಧರ್ಮಸ್ಥಳ ಬುರುಡೆ ಪ್ರಕರಣದ ಹಿಂದೆ ಕೇರಳದ ಕಮ್ಯುನಿಸ್ಟ್ ಸಂಸದನ ಪಾತ್ರದ ಶಂಕೆ..?
- ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಹೈಕೋರ್ಟ್ ಮೊರೆಹೋದ ಪ್ರತಾಪ್ ಸಿಂಹ
- ಮಳೆ-ಪ್ರವಾಹ ಪೀಡಿತ ರಾಜ್ಯಗಳಿಗೆ ಶೀಘ್ರವೇ ಪ್ರಧಾನಿ ಮೋದಿ ಭೇಟಿ