ಪ್ರತಿಯೊಬ್ಬ ಕ್ರಿಕೆಟಿಗನಿಗೂ ತಮ್ಮ ದೇಶವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಕ್ರಿಕೆಟ್‍ನ ಮಹಾಜಾತ್ರೆಯಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕ ನಂತರ ದೇಶಕ್ಕಾಗಿ ಟ್ರೋಫಿ ಗೆದ್ದುಕೊಡಬೇಕೆಂಬ ಅಚಲವಾದ ವಿಶ್ವಾಸ ಮೂಡುತ್ತದೆ. ಆದರೆ ಇಂತಹ ಹೆಬ್ಬಕೆಯೂ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ.
ತಮ್ಮ ವೃತ್ತಿ ಬದುಕಿನಲ್ಲಿ ತಾವೆಷ್ಟೇ ಸಾಧನೆ ಮಾಡಿದರೂ, ತಮ್ಮ ಬತ್ತಳಿಕೆಯಲ್ಲಿ ವಿಶ್ವಕಪ್ ಗೆಲುವು ಇಲ್ಲದಿದ್ದರೆ ಆ ಆಟಗಾರನಿಗೆ ತಾನೇನು ಸಾಧಿಸಿಲ್ಲ ಎಂಬ ಕೊರಗು ಶಾಶ್ವತವಾಗಿ ಉಳಿಯುತ್ತದೆ. ಕ್ರಿಕೆಟ್ ದೇವರು ಎಂದೇ ಖ್ಯಾತಿ ಹೊಂದಿರುವ ಸಚಿನ್ ತೆಂಡೂಲ್ಕರ್ ಕೂಡ ಹಲವು ಮುರಿಯಲಾಗದ ದಾಖಲೆಯನ್ನು ನಿರ್ಮಿಸಿದ್ದರು, ತಮ್ಮ ಬತ್ತಳಿಕೆಯಲ್ಲಿ ವಿಶ್ವಕಪ್ ಅನ್ನು ಸೇರಿಸಿಕೊಳ್ಳಬೇಕೆಂಬ ಹಂಬಲದಿಂದ ಭಗೀರಥ ಪ್ರಯತ್ನ ಮಾಡಿದ್ದರು. ಆದರೆ 6 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಂಡ ನಂತರ ಸಚಿನ್ ವಿಶ್ವ ಚಾಂಪಿಯನ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ಇನ್ನು ಎಷ್ಟೋ ಆಟಗಾರರು ತಮ್ಮ ದೇಶಕ್ಕೆ ವಿಶ್ವಕಪ್ ಗೆದ್ದುಕೊಡುವ ಪ್ರಯತ್ನ ಕೈಗೂಡದಿದ್ದರೂ, ಹೆಡ್ ಕೋಚ್ ಆಗಿ ಟ್ರೋಫಿ ಗೆದ್ದು ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ. ವಿಶ್ವಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಒಮ್ಮೆಯೂ ಫೈನಲ್ ಸುತ್ತು ಪ್ರವೇಶಿಸದಿದ್ದರೂ, 2011ರಲ್ಲಿ ಗ್ಯಾರಿ ಕಸ್ಟರ್ನ್ ಅವರು ತಮ್ಮ ತರಬೇತಿಯಲ್ಲಿ ಮಹೇಂದ್ರಸಿಂಗ್ ಧೋನಿ ತಂಡವು ಟ್ರೋಫಿ ಗೆಲ್ಲುವ ಮೂಲಕ ತಮ್ಮ ಮಹಾದಾಸೆಯನ್ನು ಈಡೇರಿಸಿಕೊಂಡಿದ್ದರು. ಈಗ ಅದೇ ಸಾಲಿಗೆ ಸೇರಲು ಭಾರತದ ಮಹಾಗೋಡೆ ರಾಹುಲ್ ದ್ರಾವಿಡ್ ಕೂಡ ಸೇರಲು ಹೊರಟಿದ್ದಾರೆ.
ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ರಾಹುಲ್ ದ್ರಾವಿಡ್:
ರಾಹುಲ್ ದ್ರಾವಿಡ್ ತರಬೇತುದಾರರಾಗಿ ಅಂರ್ಡರ್-19 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ದ್ದರು. ಈಗ ತಮ್ಮ ಖಾತೆಗೆ ಹಿರಿಯರ ವಿಶ್ವಕಪ್ ಕೂಡ ಸೇರ್ಪಡೆ ಮಾಡಿಕೊಳ್ಳಲು ಹೊರಟಿದ್ದಾರೆ.
2003ರ ಕಹಿ ನೆನಪು:
ಒಬ್ಬ ಉತ್ತಮ ಆಟಗಾರ ಮತ್ತು ಈಗ ಉತ್ಕøಷ್ಟ ಕೋಚ್ ಆಗಿರುವ ದ್ರಾವಿಡ್ ಅವರಿಗೆ 2003ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ವೈಭವದಿಂದ ಸೌರವ್ ಗಂಗೂಲಿ ನೇತೃತ್ವದ ಭಾರತದ ತಂಡವನ್ನು ಫೈನಲ್ ಹಂತ ತಲುಪಿಸಿದ್ದರಾದರೂ ರಿಕ್ಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ವಿರುದ್ಧ 125 ರನ್‍ಗಳಿಂದ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡು ನಿರಾಸೆಗೊಂಡಿದ್ದರು. ಆದರೆ ಈಗ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾವನ್ನು ಚಾಂಪಿಯನ್ ಆಗಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ದ್ರಾವಿಡ್ ಹೊರಟಿದ್ದಾರೆ.
ಐಪಿಎಲ್‍ನಲ್ಲೂ ನಿರಾಸೆ:
ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದದ ಮಹಾಗೋಡೆ, ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ತರಬೇತುದಾರರಾಗಿದ್ದರೂ ಕೂಡ ರಾಹುಲ್ ದ್ರಾವಿಡ್, ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2016 ರಲ್ಲಿ ಭಾರತದ ಅಂಡರ್-19 ತಂಡ ಮತ್ತು ಇಂಡಿಯಾ ಎ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಭಾರತವು ಅಂಡರ್ 19ನಲ್ಲಿ ಫೈನಲ್ ತಲುಪುವುದರೊಂದಿಗೆ ಅವರ ಅಕಾರಾವಯು ಪ್ರಾರಂಭವಾಯಿತು. 2016 ರಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ಶಿಮ್ರಾನ್ ಹೆಟ್ಮೇಯರ್ ನೇತೃತ್ವದ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡು ನಿರಾಸೆ ಕಂಡಿದ್ದರು.
ಭಗೀರಥ ಪ್ರಯತ್ನ:
ಆದಾಗ್ಯೂ, ದ್ರಾವಿಡ್ ಎರಡು ವರ್ಷಗಳ ನಂತರ ಟ್ರೋಫಿಯನ್ನು ಗೆದ್ದುಕೊಳ್ಳಲು 19 ವರ್ಷದೊಳಗಿನವರ ಹೊಸ ಗುಂಪಿನೊಂದಿಗೆ ಮರಳಿದರು. ಶುಭಮನ್ ಗಿಲï, ಪೃಥ್ವಿ ಶಾ, ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಶಿವಂ ಮಾವಿ ಅವರನ್ನೊಳಗೊಂಡ ತಂಡವು 2018 ರಲ್ಲಿ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಈ ಸಾಧನೆಯು ಅವರಿಗೆ ಅರ್ಹವಾದ ಮನ್ನಣೆಯನ್ನು ನೀಡಿತು ಮತ್ತು ನಂತರ ಜುಲೈ 2018 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಕೆಸಿಎ) ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ದ್ರಾವಿಡ್ ಅವರನ್ನು ನೇಮಿಸಿತು.
ರವಿಶಾಸ್ತ್ರಿಯಿಂದ ಅಧಿಕಾರ ಹಸ್ತಾಂತರ:
2021ರ ಟಿ 20 ವಿಶ್ವಕಪ್‍ನ ಸೋಲಿನ ನಂತರ ರವಿಶಾಸ್ತ್ರಿಯಿಂದ ಹೆಡ್ ಕೋಚ್ ಹುದ್ದೆಯನ್ನು ಅಲಂಕರಿಸಿದ ರಾಹುಲ್ ದ್ರಾವಿಡ್ ಯುವ ಆಟಗಾರರಾದ ಶುಭಮನ್‍ಗಿಲï, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಉತ್ತೇಜಿಸಿದರು.
2022 ರ ಆರಂಭದಲ್ಲಿ ವಿರಾಟ್ ಕೊಹ್ಲಿ ಆಟದ ಎಲ್ಲಾ ಸ್ವರೂಪಗಳಿಂದ ನಾಯಕತ್ವದಿಂದ ಕೆಳಗಿಳಿದಾಗ ದ್ರಾವಿಡ್ ಕಠಿಣ ಸಂದರ್ಭವನ್ನು ಎದುರಿಸಿದರು. ಆದರೆ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ ತಂಡವನ್ನು ಮತ್ತೆ ಉತ್ತುಂಗದತ್ತ ಕೊಂಡೊಯ್ದರು.
ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ
ಐಸಿಸಿ ಟೂರ್ನಿಗಳಲ್ಲಿ ಸೋಲು:
ರಾಹುಲ್ ದ್ರಾವಿಡ್ ಹೆಡ್ ಕೋಚ್ ಹುದ್ದೆ ಅಲಂಕರಿಸಿದ ನಂತರ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಸೋಲು ಕಂಡು ನಿರಾಸೆ ಅನುಭವಿಸಿತು. ನಂತರ ನಡೆದ 2ನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‍ಷಿಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಆದರೆ ಏಷ್ಯಾಕಪ್ ಗೆದ್ದು ಸಂಭ್ರಮದಲ್ಲಿರುವ ಟೀಮ್ ಇಂಡಿಯಾ, ಈಗ ರಾಹುಲ್ ದ್ರಾವಿಡ್‍ಗೋಸ್ಕರ ಟ್ರೋಫಿ ಗೆಲ್ಲಲು ಟೊಂಕಕಟ್ಟಿ ನಿಂತಿದೆ.
ದಾಖಲೆ ಬರೆದ ಟೀಮ್ ಇಂಡಿಯಾ:
ತಮ್ಮಲ್ಲಿ ಅಡಗಿರುವ ಅಪಾರ ಕ್ರಿಕೆಟ್‍ನ ಜ್ಞಾನ ಭಂಡಾರವನ್ನು ಆಟಗಾರರಿಗೆ ಸಮರ್ಪಿಸಿರುವ ರಾಹುಲ್ ದ್ರಾವಿಡ್ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಕೌಟ್ ಹಂತದಲ್ಲಿ 397 ಬೃಹತ್ ಮೊತ್ತ ಕಲೆ ಹಾಕಿ ದಾಖಲೆ ನಿರ್ಮಿಸಿದರು. ಆ ಪಂದ್ಯದಲ್ಲಿ 70 ರನ್‍ಗಳ ಗೆಲುವು ಸಾಸಿರುವ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಸುವ ಮೂಲಕ ರಾಹುಲ್ ದ್ರಾವಿಡ್ 2003ರ ಸೋಲಿನ ಕಹಿಯನ್ನು ಮರೆಯುವಂತಾಗಲಿ.