ನವದೆಹಲಿ,ಜು.19– ಭಾರತ ಮೂರು ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡಸಿದೆ. ಜುಲೈ 16 ಮತ್ತು 17ರಂದು ತನ್ನ ಮಿಲಿಟರಿ ಸಾಮರ್ಥ್ಯವನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಮೂರು ಪ್ರಮುಖ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಭಾರತ ಲಡಾಖ್‌ನಲ್ಲಿ ಆಧುನಿಕ ಆಕಾಶ್ ಪ್ರೈಮ್ ಕ್ಷಿಪಣಿಯನ್ನು ಪರೀಕ್ಷಿಸಿದೆ.
ಒಡಿಶಾದ ಕರಾವಳಿಯಲ್ಲಿ ಪೃಥ್ವಿ 2 ಮತ್ತು ಅಗ್ನಿ 1 ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಆ ಮೂಲಕ ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಜ್ಜಾ ಗಿದೆ ಎಂದು ಮತ್ತೊಮೆ ನಿರೂಪಿಸಿದೆ. ವಿಶೇಷವಾಗಿ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯ ನಂತರ, ಸೇನೆಯ ಈ ಆಕ್ರಮಣಕಾರಿ ನಡೆ ಭಾರತವು ಇನುಂದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಇದೀಗ ಭಾರತದ ಮಿಲಿಟರಿ ಶಕ್ತಿ ಹೊಸ ಮಟ್ಟವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶವು 3 ಮಾರಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಆ ಮೂಲಕ ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನವನ್ನು ಮಾತ್ರವಲ್ಲ, ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.
ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ ಭಾರತ ತನ್ನ ರಕ್ಷಣಾ ತಂತ್ರಜ್ಞಾನವನ್ನು ಮತ್ತಷ್ಟು ವೇಗಗೊಳಿಸಿದೆ. ಜುಲೈ 16 ಮತ್ತು 17 ರಂದು ಎರಡು ದಿನಗಳಲ್ಲಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮೂರು ಪ್ರಮುಖ ಸಾಧನಗಳನ್ನು ಪರೀಕ್ಷಿಸಿದೆ. ಪ್ರತಿಯೊಂದು ಪರೀಕ್ಷೆಗಳು ಯಶಸ್ವಿಯಾಗಿವೆ ಮತ್ತು ಅವುಗಳನ್ನು ರಕ್ಷಣಾ ಸಚಿವಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ.
ಪೃಥ್ವಿ-ಐಐ ಮತ್ತು ಅಗ್ನಿ-ಐ ಕ್ಷಿಪಣಿಗಳನ್ನು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಎರಡೂ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿದ್ದು, ಪರೀಕ್ಷೆಗಳನ್ನು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.
ಇದರ ಜೊತೆಗೆ, ಲಡಾಖ್‌ನಲ್ಲಿ ಸುಮಾರು 15,000 ಅಡಿ ಎತ್ತರದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲಿ ಈ್ಕಈ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಆಕಾಶ್ ರೆಜಿಮೆಂಟ್‌ನ 3 ನೇ ಮತ್ತು 4 ನೇ ಘಟಕಗಳಿಗೆ ಸೇರಿಸಲಾಗುವುದು. ಚೀನಾದ ಫೈಟರ್ ಜೆಟ್‌ಗಳು ಮತ್ತು ಪಾಕಿಸ್ತಾನದ ಟರ್ಕಿಶ್ ಡೋನ್‌ಗಳ ದಾಳಿಯನ್ನು ಎದುರಿಸಲು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಅಗ್ನಿ-1-ಇದು 1200 ಕಿಲೋ ಮೀಟರ್ ವ್ಯಾಪ್ತಿ. ವೇಗ: ಗಂಟೆಗೆ ಸುಮಾರು 9000 ಕಿ.ಮೀ, ಒಂದೆಡೆಯಿಂದ ಇನ್ನೊಂದೆಡೆಗೆ ದಾಳಿ ಮಾಡುವ ಸಾಮರ್ಥ್ಯವಿರುವ ಪರಮಾಣು ಶಸಾ್ತ್ರಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಪೃಥ್ವಿ-2: ಇದು 350 ಕಿ.ಮೀ ವ್ಯಾಪ್ತಿ, ದ್ರವ ಇಂಧನ ಚಾಲಿತ, ಹೆಚ್ಚು ನಿಖರವಾದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
ಆಕಾಶ್ ಪ್ರೈಮ್:
ಆಕಾಶ್ ಕ್ಷಿಪಣಿಯ ಸುಧಾರಿತ ಆವೃತ್ತಿ, ಗುರಿ ವ್ಯಾಪ್ತಿ: 30-35 ಕಿ.ಮೀ. ಎತ್ತರ: 18-20 ಕಿ.ಮೀ ಶತ್ರು ವಿಮಾನಗಳನ್ನು ನಾಶಮಾಡುವ ಸಾಮರ್ಥ್ಯವಿರುವ ಫೈಟರ್ ಜೆಟ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡೋನ್‌ಗಳನ್ನು ನಾಶಮಾಡಲು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ.
ಈ ಪರೀಕ್ಷೆಗಳು ಭಾರತದ ಮಿಲಿಟರಿ ಸಾಮರ್ಥ್ಯಗಳನ್ನು ಸಾಬೀತುಪಡಿಸಿವೆೆ. ಮಾತ್ರವಲ್ಲ, ನಮ ನೆರೆಹೊರೆಯ ದೇಶಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ. ವಿಶೇಷವಾಗಿ ಚೀನಾ ಮತ್ತು ಟರ್ಕಿಶ್ ತಂತ್ರಜ್ಞಾನವನ್ನು ಇನ್ನೂ ಅವಲಂಬಿಸಿರುವ ಪಾಕಿಸ್ತಾನಕ್ಕೆ ಈ ಕ್ಷಿಪಣಿ ಪರೀಕ್ಷೆಯ ಯಶಸ್ಸು ಎಚ್ಚರಿಕೆಯ ಸಂದೇಶವಾಗಿದೆ.
- ಬಿಎಂಟಿಸಿ ಬಸ್ ಚಾಲಕನೊಂದಿಗೆ ಕಾನ್ಸ್ಟೆಬಲ್ ಕಿರಿಕ್
- ಕೆ.ಆರ್.ಮಾರ್ಕೆಟ್ನಲ್ಲಿ ಹೈಟೆಕ್ ಪಾರ್ಕಿಂಗ್ ಲಾಟ್
- ಕಾರು ನಿಲ್ಲಿಸಿ ಮನವಿ ಸ್ವೀಕರಿಸಿದ ಸಿಎಂ
- ಕಾವೇರಿ ನದಿಯಲ್ಲಿ ಈಜಲು ಹೋದ ಇಬ್ಬರು ಬಿಬಿಎಂ ವಿದ್ಯಾರ್ಥಿಗಳು ನೀರುಪಾಲು
- ಹೃದಯಾಘಾತದಿಂದ ರೌಡಿ ಸಾವು