Monday, July 21, 2025
Homeರಾಜ್ಯಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ತ್ರಿಪುರ ರಾಜ್ಯದ ವ್ಯಕ್ತಿ ಅಂದರ್

ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ತ್ರಿಪುರ ರಾಜ್ಯದ ವ್ಯಕ್ತಿ ಅಂದರ್

Tripura man arrested for making derogatory remarks against Kannadigas

ಬೆಂಗಳೂರು,ಜು.19- ಡೆಲಿವರಿ ಬಾಯ್‌ ಹಿಂದಿಯಲ್ಲಿ ಮಾತನಾಡಲಿಲ್ಲವೆಂಬ ಕಾರಣಕ್ಕೆ ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ನಿಂದಿಸಿದ ತ್ರಿಪುರ ರಾಜ್ಯದ ಥೆರಫಿಸ್ಟ್‌ನನ್ನು ಬೊಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಿಥುನ್‌ ಸರ್ಕಾರ್‌ ಬಂಧಿತ ಥೆರಫಿಸ್ಟ್‌. ತ್ರಿಪುರ ಮೂಲದವರಾದ ಈತ ಕಳೆದ ಒಂಬತ್ತು ವರ್ಷಗಳಿಂದ ಬೇಗೂರು ಮುಖ್ಯ ರಸ್ತೆಯಲ್ಲಿ ವಾಸವಿದ್ದಾರೆ. ಇತ್ತೀಚೆಗೆ ಮಿಥುನ್‌ ಅವರು ಆನ್‌ಲೈನ್‌ನಲ್ಲಿ ಒಂದು ಟೀ-ಶರ್ಟ್‌ ಬುಕ್‌ ಮಾಡಿದ್ದರು.

ಚಾಮುಂಡೇಶ್ವರಿ ನಗರದ ನಿವಾಸಿ ಡೆಲಿವರಿ ಬಾಯ್‌ ರಂಜಿತ್‌ ಅವರು ಜು.17 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆಟೀ-ಶರ್ಟ್‌ ಡೆಲಿವರಿಗಾಗಿ ಮಿಥುನ್‌ ಅವರ ಮನೆ ಬಳಿ ಹೋಗಿ ಮೊಬೈಲ್‌ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ಮಿಥುನ್‌ ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ತಾಕೀತು ಮಾಡಿದಲ್ಲದೇ, ಹಿಂದಿಯಲ್ಲಿ ಕೆಟ್ಟ ಪದಗಳಿಂದ ನಿಂದಿಸಿ ನಾವು ಬೆಂಗಳೂರು ನಗರದಲ್ಲಿ ಶೇ.70 ರಷ್ಟಿದ್ದೇವೆ, ನಾವು ಇಲ್ಲಿಂದ ಹೋದರೆ ಕನ್ನಡಿಗರ ಬಳಿ ಟೊಮಟೊ ತೆಗೆದುಕೊಳ್ಳೋಕು ಹತ್ತು ರೂ. ಗೂ ಗತಿ ಇರಲ್ಲ ಎಂದು ನಾಲಿಗೆ ಹರಿ ಬಿಟ್ಟಿದ್ದಾನೆ.

ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನ್ನಡಿಗರ ಭಾವನೆಗಳಿಗೆ ದಕ್ಕೆ ಉಂಟು ಮಾಡಿದಲ್ಲದೇ, ಕನ್ನಡ ಮತ್ತು ಇತರೆ ಭಾಷಿಕರ ನಡುವೆ ವೈಮನಸ್ಸು ಉಂಟುಮಾಡಿ ದ್ವೇಷ ಭಾವನೆ ಉಂಟಾಗುವಂತೆ ಆರೋಪಿ ಮಾತನಾಡಿದ್ದಾನೆ.

ಈ ಬಗ್ಗೆ ಡೆಲಿವರಿ ಬಾಯ್‌ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಮಿಥುನ್‌ ಸರ್ಕಾರ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News