ಮೈಸೂರು, ಜು.20- ಫೇಸ್‌ಬುಕ್‌ನಲ್ಲಿ ಪರಿಚಯವಾದ ವೈದ್ಯನೊಬ್ಬ ಮಹಿಳೆಯನ್ನು ವಂಚಿಸಿ ತನ್ನ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಲಾಕರ್ ತೆರೆಸಿ, ಅದರಲ್ಲಿಟ್ಟಿದ್ದ ಮಹಿಳೆಯ 10.50 ಲಕ್ಷ ಹಣ, 500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ವಸ್ತುಗಳನ್ನು ಲಪಟಾಯಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ವೇತಾ ಮಹಂತೇಶ್(46) ವಂಚನೆಗೆ ಒಳಗಾದ ಮಹಿಳೆ. ಡಾ.ಶಿವಕುಮಾರ್ ವಂಚಿಸಿರುವ ವೈದ್ಯ.ಕರೊನಾ ಸಂದರ್ಭದಲ್ಲಿ ಶ್ವೇತಾ ಅವರು ತಮ್ಮ ಪತಿ ಮಹಂತೇಶ್ ಹಾಗೂ ಮಗನನ್ನು ಕಳೆದುಕೊಂಡಿದ್ದರು. ಮಹಂತೇಶ್ ಲೋಕೋಪಯೋಗಿ ಇಲಾಖೆಯಲ್ಲಿ ಎಫ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಪತ್ನಿ ಶ್ವೇತಾ ಅವರಿಗೆ ಕೆಲಸ ದೊರೆತಿತ್ತು.
ಈ ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡು ಮನೆಗೆ ಬಂದ ವೈದ್ಯ ಶಿವಕುಮಾರ್ ನಯವಾದ ಮಾತುಗಳಿಂದ ನಂಬಿಸಿ ಶ್ವೇತಾ ಅವರ ಬಳಿ ಇದ್ದ 500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ತೂಕದ 110 ಬೆಳ್ಳಿ ನಾಣ್ಯಗಳನ್ನು ತನ್ನ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್‌ನಲ್ಲಿ ಲಾಕರ್ ಓಪನ್ ಮಾಡಿಸಿದ್ದ.
ಸುರಕ್ಷತೆ ಹೆಸರ ಹೇಳಿ ಲಾಕರ್ ಕೀಗಳನ್ನು ಶ್ವೇತಾ ಬಳಿ ಇರಿಸಿದ್ದ. ನಂತರ ಹೆಚ್ಚಿನ ಲಾಭದ ಆಮಿಷ ತೋರಿಸಿ ಶ್ವೇತಾ ಬಳಿ ಇದ್ದ 10.50 ಲಕ್ಷ ಹಣವನ್ನು ಡಾ.ಶಿವಕುಮಾರ್ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ ಲಾಕರ್‌ನಲ್ಲಿದ್ದ ವಜ್ರದ ಉಂಗುರ ಡಾ.ಶಿವಕುಮಾರ್ ಬೆರಳಿನಲ್ಲಿ ಕಾಣಿಸಿದೆ. ಲಾಕರ್ ಕೀ ನನ್ನ ಬಳಿ ಇರುವಾಗ ವಜ್ರದ ಉಂಗುರ ಹೇಗೆ ಬಂತು ಎಂದು ಪ್ರಶ್ನಿಸಿದಾಗ ಆತನಿಂದ ಸಮಂಜಸ ಉತ್ತರ ಬಂದಿಲ್ಲ.
ನಂತರ ಪರಿಶೀಲಿಸಿದಾಗ ಲಾಕರ್‌ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಡಾ.ಶಿವಕುಮಾರ್ ಪಾಲಾಗಿತ್ತು. ತನ್ನ ಚಿನ್ನಾಭರಣ ಬೆಳ್ಳಿ ಹಾಗೂ ನಗದು ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಡಾ.ಶಿವಕುಮಾರ್ ಜೀವಬೆದರಿಕೆ ಹಾಕಿದ್ದಾನೆ ಎಂದು ಶ್ವೇತಾ ಅವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ