Sunday, July 20, 2025
Homeರಾಷ್ಟ್ರೀಯ | Nationalತಮಿಳುನಾಡಿನಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ : ಪಳನಿಸ್ವಾಮಿ

ತಮಿಳುನಾಡಿನಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ : ಪಳನಿಸ್ವಾಮಿ

TN Crime Concerns: Palaniswami Slams DMK Over Girls’ Safety in Tamil Nadu

ನಾಗಪಟ್ಟಣಂ (ತಮಿಳುನಾಡು),ಜು.20- ತಮಿಳುನಾಡಿನಲ್ಲಿ ಮಹಿಳೆಯರ ವಿರುದ್ದ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿಕಳವಳ ವ್ಯಕ್ತಪಡಿಸಿದ್ದಾರೆ.

ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದೆ ಓಡಾಡುತ್ತಿದ್ದು ಹುಡುಗಿಯರು ಮತ್ತು ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ರಾಜ್ಯ ಡಿಎಂಕೆ ಸರ್ಕಾವನ್ನು ಟೀಕಿಸಿದ್ದಾರೆ.ಜನರನ್ನು ರಕ್ಷಿಸಿ, ಮತ್ತು ತಮಿಳುನಾಡನ್ನು ಉದ್ಧಾರ ಮಾಡಿ ಎಂಬ ರಾಜ್ಯವ್ಯಾಪಿ ಅಭಿಯಾನದ ಭಾಗವಾಗಿ ಇಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ, ಗುಮ್ಮಿಡಿಪೊಂಡಿಯಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಯನ್ನು ಇನ್ನೂ ಬಂಧಿಸಲಾಗಿಲ್ಲ. ಡಿಎಂಕೆ ಆಡಳಿತದಲ್ಲಿ ಯುವತಿಯರು, ಮಹಿಳೆಯರು ಮತ್ತು ವೃದ್ಧರು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದರು.

ಅಂತಹ ಸರ್ಕಾರ ಮುಂದುವರಿಯಬೇಕೆಂದು ನೀವು ಬಯಸುತ್ತೀರಾ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.ಬ್ರಿಟಿಷರ ವಿರುದ್ದ ಉಪ್ಪಿನ ಸತ್ಯಾಗ್ರಹಕ್ಕೆ ಹೆಸರುವಾಸಿಯಾದ ವೇದಾರಣ್ಯಂನಲ್ಲಿ ಮಾತನಾಡಿದ ಪಳನಿಸ್ವಾಮಿ, ಪ್ರಸ್ತುತ ಡಿಎಂಕೆ ಆಡಳಿತದಿಂದ ಜನರು ಎಲ್ಲಾ ರಂಗಗಳಲ್ಲಿಯೂ ಭ್ರಮನಿರಸನಗೊಂಡಿದ್ದಾರೆ ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಸೋಲಿಸಲುನಾರಿಯರು ಸಿದ್ದರಾಗಿದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು, ಪಕ್ಷದ ಹಿರಿಯರೊಂದಿಗೆ ಪಳನಿಸ್ವಾಮಿ, ವೆಲಾಂಕಣಿ ಚರ್ಚ್ ಎಂದೂ ಕರೆಯಲ್ಪಡುವ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಹೆಲ್ ಗೆ ಭೇಟಿ ನೀಡಿ, ಮೇಣದಬತ್ತಿಯನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ನಾಗಪಟ್ಟಣಂನಲ್ಲಿ ರೋಡ್ ಶೋ ಅನ್ನು ಉದ್ದೇಶಿಸಿ ಮಾತನಾಡುವಾಗ, ನೆರೆಹೊರೆಯ ಮುಸ್ಲಿಮರು ತಮ್ಮ ಸಂಜೆ ಪ್ರಾರ್ಥನೆಯನ್ನು ಮುಗಿಸುವವರೆಗೆ ಅವರು ತಮ್ಮ ಪ್ರಚಾರ ವಾಹನದಿಂದ ಕೆಲವು ನಿಮಿಷಗಳ ಕಾಲ ವಿರಾಮಗೊಳಿಸಿದರು.

RELATED ARTICLES

Latest News