ಚಿತ್ರದುರ್ಗ,ಜು.20– ಮದುವೆ ಯಾಲಿಲ್ಲ ಎಂದು ನೊಂದ ಗೃಹ ರಕ್ಷಕ ದಳದ ಸಿಬ್ಬಂದಿ ನೇಣು ಹಾಕಿಕೊಂಡು ಆತಹತ್ಯೆಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲುರು ತಾಲೂಕಿನ ಜೆಬಿ ಹಳ್ಳಿಯಲ್ಲಿ ನಡೆದಿದೆ.
ತಿರುಮಲ (31) ಮೃತ ಹೋಂ ಗಾರ್ಡ್. ತಿರುಮಲ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು ತಮ ಮದುವೆ ಬಗ್ಗೆ ತಲೆಕೆಡಿಸಿಕೊಂಡಿದ್ದರು.
ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚಿಗೆ ಮೂರು ಕಡೆ ಹೆಣ್ಣು ನೋಡಲು ತೆರಳಿದ್ದು, ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮ ಹೆಚ್ಚು ಘಾಸಿಯಾಗಿತ್ತು.ವಯಸ್ಸಾಗುತ್ತಿದೆ ಮದುವೆ ಕಷ್ಟ ಎಂದು ಮನನೊಂದು, ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಭಾರತದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ನವಾರೋ
- ಪ್ರಯಾಗ್ರಾಜ್ : ಗಂಗೆ ಪಾಲಾದ ಮೂವರು ಬಾಲಕರು
- ಗಾಂಧಿ ಕುಟುಂಬವನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಬ್ಯಾಲಟ್ ಪೇಪರ್ ಬಳಕೆ ನಿರ್ಧಾರ : ಆರ್.ಅಶೋಕ್ ವಾಗ್ದಾಳಿ
- ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗಾಗಿ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಬಿಡುಗಡೆ
- ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ