Wednesday, July 23, 2025
Homeರಾಷ್ಟ್ರೀಯ | Nationalಭೀಕರ ಸರಣಿ ಅಪಘಾತ: ತಂದೆ - ಮಗ ಸೇರಿ ಮೂವರ ದುರ್ಮರಣ

ಭೀಕರ ಸರಣಿ ಅಪಘಾತ: ತಂದೆ – ಮಗ ಸೇರಿ ಮೂವರ ದುರ್ಮರಣ

ಹೊಸೂರು,(ತಮಿಳುನಾಡು),ಜು.21-ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯ ಹೊಸೂರು ಸಮೀಪದ ಕುರುಬರಪಳ್ಳಿ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ತಂದೆ- ಮಗ ಸೇರಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕರ್ನಾಟಕ ರಾಜ್ಯಗಡಿಭಾಗ ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕುರುಬರಪಳ್ಳಿ ಬಳಿ ಹನ್ನೆರಡಕ್ಕೂ ಅಧಿಕ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು ಬಹುತೇಕ ವಾಹನಗಳು ಜಖಂಗೊಂಡಿವೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ವೇಳೆ ಲಾರಿಯೊಂದು ಅತಿವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ವಾಹನಗಳಿಗೆ ಗುದ್ದಿದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ- ಮಗ ಹಾಗು ಆಟೋ ಚಾಲಕ ಮೃತಪಟ್ಟಿದ್ದು,ಏಳಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷ್ಣಗಿರಿ ಜಿಲ್ಲಾಧಿಕಾರಿ ದಿನೇಶ್‌ ಕುಮಾರ್‌,ಎಸ್ಪಿ ತಂಗದೊರೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೆದ್ದಾರಿಯಲ್ಲಿ ಸರಣಿ ಅಪಘಾತ ಹಿನ್ನೆಲೆ ಕಿಲೋಮೀಟರ್‌ ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.ನಜ್ಜುಗುಜ್ಜಾದ ಕಾರುಗಳು ಹಾಗೂ ಇತರ ವಾಹನಗಳನ್ನ ಕ್ರೇನ್‌ ಮೂಲಕ ತೆರವು ಮಾಡಲಾಗಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News