Wednesday, July 23, 2025
Homeಅಂತಾರಾಷ್ಟ್ರೀಯ | Internationalಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್‌ ಢಾಕಾದ ಶಾಲೆಯ ಮೇಲೆ ಪತನ

ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್‌ ಢಾಕಾದ ಶಾಲೆಯ ಮೇಲೆ ಪತನ

ಢಾಕಾ, ಜು.21-ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವು ಇಂದು ಮಧ್ಯಾಹ್ನ ಢಾಕಾದ ಉತ್ತರ ಪ್ರದೇಶದ ಶಾಲಾ ಆವರಣದಲ್ಲಿ ಪತನಗೊಂಡಿದೆ. ಮಧ್ಯಾಹ್ನ ಢಾಕಾದ ಮೈಲ್‌ಸ್ಟೋನ್‌‍ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ವಿಮಾನ ಪತನಗೊಂಡಿದೆ ಎಂದು ಮಿಲಿಟರಿ ಮತ್ತು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತನಗೊಂಡ ಎಫ್‌ -7 ಬಿಜಿಐ ವಿಮಾನವು ವಾಯುಪಡೆಗೆ ಸೇರಿದೆ ಎಂದು ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಸಂಕ್ಷಿಪ್ತ ಹೇಳಿಕೆಯಲ್ಲಿ ದೃಢಪಡಿಸಿದೆ. ಅಗ್ನಿಶಾಮಕ ಅಧಿಕಾರಿ ಲಿಮಾ ಖಾನ್‌ ಮಾಹಿತಿ ನೀಡಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ, ಆದರೂ ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ.

RELATED ARTICLES

Latest News