ಬೆಂಗಳೂರು,ಜು.21- ಸಣ್ಣಮಟ್ಟದ ವ್ಯಾಪಾರಿಗಳಿಗೆ ಜಿಎಸ್‍ಟಿ ನೋಟೀಸ್ ನೀಡಿರುವುದರ ಹಿಂದೆ ಕೇಂದ್ರ ಸರ್ಕಾರದ ಜಿಎಸ್‍ಟಿ ಕೌನ್ಸಿಲ್‍ನ ಪತ್ರದ ಪಾತ್ರ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತರಕಾರಿ ಮಾರುವವರು, ಎಳನೀರು ವ್ಯಾಪಾರಿಗಳು, ಹೂಕಟ್ಟುವವರು, ಹಣ್ಣಿನ ವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳಿಗೂ ಕೇಂದ್ರ ಸರ್ಕಾರದ ಜಿಎಸ್‍ಟಿ ಕಾನೂನಿನಿಂದ ತೊಂದರೆಯಾಗುತ್ತಿದೆ. ಇದರ ವಿರುದ್ಧ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‍ಗಾಂ„ ಹೋರಾಟ ನಡೆಸಲಿದ್ದಾರೆ ಎಂದರು.
2019 ರಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವೆಗಳ ಕಾಯ್ದೆ (ಜಿಎಸ್‍ಟಿ ಆಕ್ಟ್) ಅ„ಸೂಚನೆ ಹೊರಡಿಸಿದೆ. ಅದರ ಪ್ರಕಾರ 40 ಲಕ್ಷ ರೂ.ಗಳಿಗೂ ಮೇಲ್ಟಟ್ಟ ವಹಿವಾಟು ನಡೆದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಬಾಯಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಕೇಂದ್ರಸರ್ಕಾರದ ಜಿಎಸ್‍ಟಿ ಕೌನ್ಸಿಲ್ ಬರೆದಿರುವ ಪತ್ರ ನಮ್ಮ ಬಳಿ ಇದೆ. ಅಗತ್ಯ ಇದ್ದರೆ ಅದನ್ನು ಬಹಿರಂಗಪಡಿಸುತ್ತೇವೆ. ಈ ಪತ್ರದ ಮೂಲಕ ಕ್ರಮ ಕೈಗೊಳ್ಳಲು ಒತ್ತಡ ಹೇರಲಾಗಿದೆ. ಅದರಂತೆ ವಾಣಿಜ್ಯ ತೆರಿಗೆ ಇಲಾಖೆ 14 ಸಾವಿರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟೀಸ್ ನೀಡಿದೆ ಎಂದು ಹೇಳಿದರು.
ಕರ್ನಾಟಕ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುವ ರಾಜ್ಯ. ಜೀವನೋಪಾಯಕ್ಕಾಗಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಈಗ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಇದನ್ನು ಗಮನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ರಾಜ್ಯಸರ್ಕಾರದ ಅ„ಕಾರಿಗಳೊಂದಿಗೆ ಚರ್ಚೆ ನಡೆಸಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಆದರೆ ಕೇಂದ್ರದ ಕಾನೂನುಗಳು ಸರಿ ಇಲ್ಲ. ಅವುಗಳನ್ನು ಸರಿಪಡಿಸುವ ಕೆಲಸ ಕೂಡಲೇ ನಡೆಯಬೇಕಿದೆ ಎಂದರು. ಒಂದು ಲಕ್ಷ ಕೋಟಿ ರೂಪಾಯಿಯ ತೆರಿಗೆ ಸಂಗ್ರಹದ ಗುರಿಯನ್ನು ತÀಲುಪಬೇಕು ಎಂದು ಮುಖ್ಯಮಂತ್ರಿಯವರು ಆದೇಶಿಸಿದ ಕಾರಣಕ್ಕಾಗಿ ಈ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಸರಿಯಲ್ಲ.ಕೇಂದ್ರ ಸರ್ಕಾರದ ಕಾನೂನುಗಳು ಪರಿಷ್ಕರಣೆಯಾಗಬೇಕು. ಜಿಎಸ್‍ಟಿ ಕೌನ್ಸಿಲ್‍ಗೆ ಬರೆದ ಪತ್ರವನ್ನು ಬಿಜೆಪಿಯವರು ಒಮ್ಮೆ ನೋಡಲಿ. ನಾವು ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ನಮ್ಮಲ್ಲಿ ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ಜನ ನಮ್ಮನ್ನು ಭೇಟಿ ಮಾಡುತ್ತಾರೆ ಎಂದು ಡಿಕೆಶಿ ಹೇಳಿದರು.
ಏನು ಮಾಡಬೇಕೆಂದು ಬಿಜೆಪಿಯವರು ಹೇಳಲಿ:
ಧರ್ಮಸ್ಥಳ ಭಾಗದಲ್ಲಿ ನಡೆದಿರುವ ಅನುಮಾನಸ್ಪದ ನಾಪತ್ತೆ ಪ್ರಕರಣಗಳು, ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ದಳ ರಚಿಸಲಾಗಿದೆ. ಗೃಹಸಚಿವರು ಇದನ್ನು ನಿರ್ವಹಣೆ ಮಾಡುತ್ತಾರೆ. ಒಳ್ಳೆಯ ಅ„ಕಾರಿಗಳ ತಂಡವನ್ನೇ ನಿಯೋಜಿಸಲಾಗಿದೆ ಎಂದು ಡಿಕೆಶಿ ತಿಳಿಸಿದರು. ಈ ವಿಚಾರವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಬಿಜೆಪಿಯವರೇ ಹೇಳಲಿ. ನಾವು ಅದರಂತೆ ಅದನ್ನುಅನುಸರಿಸುತ್ತೇವೆ. ಬಿಜೆಪಿಯವರು ಮತ್ತು ಮಾಧ್ಯಮಗಳ ಭಾಷೆಯೇ ನನಗರ್ಥವಾಗುತ್ತಿಲ್ಲ. 15 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ವ್ಯಕ್ತಿಯೊಬ್ಬ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾನೆ. ಮಾಧ್ಯಮಗಳು ಧರ್ಮಸ್ಥಳ ಭಾಗಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನು ದೊಡ್ಡದಾಗಿ ಪ್ರಚಾರ ಮಾಡಿದೆ. ಸರ್ಕಾರ ಎಲ್ಲರ ಧ್ವನಿಗೂ ಕಿವಿಯಾಗಬೇಕು. ವಿರೋಧಪಕ್ಷಗಳ ಅಭಿಪ್ರಾಯಗಳನ್ನೂ ಗೌರವಿಸಬೇಕು. ಹಾಗಾಗಿ ತನಿಖಾ ತಂಡ ರಚಿಸಿದೆ. ಈ ವಿಚಾರವಾಗಿ ಆತುರ ಬೇಡ. ತನಿಖೆಯ ನಂತರ ಬರುವ ಅಂಶಗಳನ್ನು ಪರಿಗಣಿಸುವುದು ಸೂಕ್ತ ಎಂದು ಹೇಳಿದರು.
ಬಿಬಿಎಂಪಿ ವಿಭಜನೆ ಶತಸಿದ್ಧ :
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಭಜಿಸಲು ನಾವು ಬದ್ಧರಾಗಿದ್ದು, ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕೂ ಮುನ್ನ ವಿರೋಧಪಕ್ಷಗಳ ನಾಯಕರ ಜೊತೆ ಅ„ಕೃತವಾಗಿ ಮತ್ತು ಅನ„ಕೃತವಾಗಿ ಚರ್ಚೆ ಮಾಡುತ್ತೇವೆ. ಜನಸಾಮಾನ್ಯರ ಅಭಿಪ್ರಾಯಗಳನ್ನೂ ಪರಿಗಣಿಸಿ ಬೆಂಗಳೂರಿನ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದರು. ಇ ಖಾತಾ, ಎ ಖಾತಾ, ಬಿ ಖಾತಾ ಆಂದೋಲನಗಳು ಮುಗಿದ ಬಳಿಕ ಸಂಬಂಧಪಟ್ಟಂತೆ ಚರ್ಚೆಯನ್ನು ಮುಂದುವರೆಸುತ್ತೇವೆ, ಸಭೆ ಕರೆಯುತ್ತೇವೆ ಎಂದ ಅವರು, 5 ಪಾಲಿಕೆಗಳನ್ನಾಗಿ ವಿಭಜಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ. ಇದು ಯಾವುದೇ ತಪ್ಪುಗಳನ್ನು ಮಾಡದಂತೆ ನಮಗೆ ಎಚ್ಚರಿಕೆಯ ಗಂಟೆ. ನ್ಯಾಯಾಲಯದಲ್ಲಿ ಪ್ರಶ್ನಿಸುವ ಜನಸಮಾನ್ಯರ ಅ„ಕಾರವನ್ನು ನಾವು ಮೊಟಕುಗೊಳಿಸುವುದಿಲ್ಲ ಎಂದು ತಿಳಿಸಿದರು.