Friday, November 28, 2025
HomeEesanje Newsಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭಿಸಿದ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್

ಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭಿಸಿದ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್

ESDS Software Solutions Limited launches next-generation GPU Superpod

ಬೆಂಗಳೂರು: ಸರ್ಕಾರಿ ವಲಯ, ಬ್ಯಾಂಕಿಂಗ್‌, ಸಂಶೋಧನ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ “ಕೃತಕ ಬುದ್ದಿಮತ್ತೆ” (ಎಐ) ಬಳಕೆಯ ಮೂಲಕ ಕೆಲಸದ ಒತ್ತಡವನ್ನು ಸುಧಾರಿಸಿ, ಕೆಲಸದಲ್ಲಿ ಚುರುಕುತನ ಮೂಡಿಸುವ ಉದ್ದೇಶದಿಂದ ಇಎಸ್‌ಡಿಎಸ್‌ ಸಾಫ್ಟ್‌ವೇರ್‌ ಸಲ್ಯೂಷನ್‌ “ ಮುಂದಿನ ಪೀಳಿಗೆಗಾಗಿ “ಜಿಪಿಯು ಸೂಪರ್‌ಪಾಡ್ಸ್‌” ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಇಎಸ್‌ಡಿಎಸ್‌ ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್ ಕಂಪನಿಯ 20ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಪಿಯೂಷ್ ಪ್ರಕಾಶಚಂದ್ರ ಸೋಮನಿ ಅವರು ಘೋಷಿಸಿದರು, ಬಳಿಕ ಮಾತನಾಡಿದ ಅವರು, ಪ್ರಸ್ತುತ ಎಐ ಮೇಲೆ ಹೆಚ್ಚುತ್ತಿರುವ ಬೇಡಿಕೆ ಪರಿಹರಿಸಲು “ಗ್ರಾಫಿಕ್‌ ಪ್ರೋಸೆಸಿಂಗ್‌ ಯುನಿಟ್ಸ್‌” (ಜಿಪಿಯು) ಉತ್ತಮ ಹಾದಿಯಾಗಿದೆ. ಜಾಗತಿಕ AI ಮೌಲ್ಯವು 2030 ರ ವೇಳೆಗೆ ಸುಮಾರು $15.7 ಟ್ರಿಲಿಯನ್ ಡಾಲರ್‌ ಸಮೀಪಿಸುವ ನಿರೀಕ್ಷೆಯಿದೆ, ಅದೇ ರೀತಿ, ಶೇ.80ರಷ್ಟು ಹೂಡಿಕೆಯು GPU ಕಡೆಗೆ ಕೇಂದ್ರೀಕರಿಸಿದೆ. ಜಿಪಿಯು ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದ್ದು, ಪರಿಸರ ವ್ಯವಸ್ಥೆಯ ಅಗತ್ಯಕ್ಕೂ ಸ್ನೇಹಮಯವಾಗಿದೆ. ಆದರೆ, ಜಿಪಿಯು ದುಬಾರಿ ವೆಚ್ಚದ ಕಾರಣದಿಂದ ಸಾಕಷ್ಟು ಸಂಸ್ಥೆಗಳು ಜಿಪಿಯು ಬದಲಿಗೆ ಎಐ ನತ್ತ ಒಲವು ತೋರುತ್ತಿದ್ದಾರೆ, ಹೀಗಾಗಿ ನಮ್ಮ ಸಂಸ್ಥೆ ದೊಡ್ಡ-ಪ್ರಮಾಣದ ಜಿಪಿಯು ಕ್ಲಸ್ಟರ್‌ ಮತ್ತು ಸೂಪರ್‌ಪಾಡ್‌ ಪರಿಚಯಿಸಿದ್ದು, ಬಳಕೆಗೂ ಹೆಚ್ಚು ಸುಲಭದಾಯಕವಾಗಿವೆ.

ಈ ನಮ್ಮ GPU ಸೂಪರ್‌ಪಾಡ್‌ಗಳು ಹೆಚ್ಚು ಕಾರ್ಯಕ್ಷಮತೆ, ಸ್ಥಿರತೆ ಮತ್ತು ಪ್ರಮಾಣವನ್ನು ಒದಗಿಸುವ ಎಐ ಆಧಾರಿತವನ್ನು ಕಡಿಮೆ ಮಾಡುತ್ತದೆ. ಬಳಕೆದಾರರಿಗೇ ಹೆಚ್ಚು ಅವಕಾಶ ನೀಡಲು ನಾವು ಸೂಪರ್‌ಪಾಡ್ ಕಾನ್ಫಿಗರೇಟರ್ ಉಪಕರಣವನ್ನು ರಚಿಸಿದ್ದೇವೆ ಎಂದು ವಿವರಿಸಿದರು.

ಈ ಮಹತ್ವದ ಪ್ರಾರಂಭವು ESDS ಅನ್ನು ಕ್ಲೌಡ್, ನಿರ್ವಹಣೆಯ ಸೇವೆಗಳು, ಡೇಟಾ ಸೆಂಟರ್ ಮೂಲಸೌಕರ್ಯ ಮತ್ತು ಸಾಫ್ಟ್‌ವೇರ್ ಪರಿಹಾರಗಳ ಸಂಪೂರ್ಣ ಶ್ರೇಣಿಯ ಪೂರೈಕೆದಾರರಾಗಿ ಕೆಲಸ ಮಾಡಲಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ AI ಕಂಪ್ಯೂಟ್ ಒದಗಿಸುವ GPU ಪೂರೈಕೆದಾರರಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ. GPUs ಮತ್ತು ಆಕ್ಸಿಲರೇಟರ್‌ಗಳನ್ನು ಒಳಗೊಂಡಂತೆ AI-ಆಪ್ಟಿಮೈಸ್ಡ್ ಸರ್ವರ್‌ಗಳ ಮೇಲಿನ ಜಾಗತಿಕ ವೆಚ್ಚವು 2026 ರ ವೇಳೆಗೆ ಸರಿಸುಮಾರು US $329.5 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಂದಾಜಿಸಿದರು.

ಇನ್ನು, ನಮ್ಮ ಜಿಪಿಯು ಸರ್ವಿಸ್‌ ಪಡೆದಿದ್ದ ಒಂದು ಸಂಶೋಧನಾ ಪ್ರಯೋಗಾಲಯವು ತನ್ನ ವ್ಯವಹಾರದಲ್ಲಿ ಹಿಂದೆಂದಿಗಿಂತಲೂ ಉತ್ತಮ ಔಟ್‌ಪುಟ್‌ ಹೊರಹಾಕಿದೆ. ಜಿಪಿಯು ಸೇವೆಯ ಮೂಲಕ 40 ದಿನಗಳವರೆಗೆ ವಿಸ್ತರಿಸಲಾಗಿದ್ದ 50-ಬಿಲಿಯನ್-ಪ್ಯಾರಾಮೀಟರ್ ಮಾದರಿಯ ತರಬೇತಿಯನ್ನು ಕೇವಲ 10 ದಿನಗಳಿಗೆ ಇಳಿಸಿಕೊಳ್ಳಲು ಸಹಾಯ ಮಾಡಿತು, ಅಷ್ಟೆ ಅಲ್ಲದೆ, ಇವರ ವೆಚ್ಚದಲ್ಲಿಯೂ 60 ಪ್ರತಿಶತ ಕಡಿತಗೊಳಿಸಿದ್ದು, 4 ಪಟ್ಟು ಕಡಿಮೆ ಪುನರಾವರ್ತನೆ ಕೆಲಸಗಳನ್ನು 30 ಪಟ್ಟು ವೇಗಕ್ಕೆ ತೆಗೆದುಕೊಂಡು ಹೋಗಿದೆ ಎಂದು ವಿವರಣೆ ನೀಡಿದರು.

RELATED ARTICLES

Latest News